Sunday, August 9, 2026
spot_imgspot_img
spot_imgspot_img

ಕಲಬುರಗಿ: ಲಕ್ಷಾಂತರ ಮೌಲ್ಯದ ಪಂಪ್ ಸೆಟ್ ಕೇಬಲ್ ಕಳ್ಳತನ

- Advertisement -
- Advertisement -

ಕಲಬುರಗಿ: ರೈತರ ಪಂಪ್ ಸೆಟ್ ಕೇಬಲ್ ಕಳ್ಳತನ ಮಾಡಿರುವ ಘಟನೆ ಕಲಬುರಗಿಯ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಜಕುಮಾರ್ ಜಾದವ್, ಸಂತೋಷ ಚೆನ್ನೂರ, ರೇವಣಸಿದ್ದ ಚೆನ್ನೂರ್ ಸೇರಿದಂತೆ ಏಳೆಂಟು ಜನ ರೈತರ ಪಂಪ್ ಸೆಟ್ ಕೇಬಲ್ ಕಳುವು ಮಾಡಿದ್ದರ ಜೊತೆಗೆ, ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಪ್ ಸೆಟ್ ಕೇಬಲ್ ಅನ್ನೂ ಕಳ್ಳರು ಕದ್ದೊಯ್ದಿದ್ದಾರೆ.

ಒಂದೇ ರಾತ್ರಿ ಗ್ರಾಮದಲ್ಲಿ ಖದೀಮರಿಂದ ಕೇಬಲ್ ಕಳ್ಳತನವಾಗಿದ್ದು, ಲಕ್ಷಾಂತರ ಮೌಲ್ಯದ ಕೇಬಲ್ ಕಳ್ಳತನ ಮಾಡಿ ಏಸ್ಕೇಪ್ ಆಗಿದ್ದಾರೆ. ಕಳ್ಳರನ್ನ ಬಂಧಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೂ ಇದೇ ರೀತಿ ಕಳ್ಳತನವಾಗಿತ್ತು. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದಾಗಿ ವರದಿಯಿಂದ ತಿಳಿದುಬಂದಿದೆ .

- Advertisement -

Related news

error: Content is protected !!