


ಚಿಕ್ಕಮಗಳೂರು: 4 ವರ್ಷ 1 ತಿಂಗಳ ಬಾಲಕ ಕೇವಲ 2 ನಿಮಿಷ 53 ಸೆಕೆಂಡಿನಲ್ಲಿ ಹನುಮಾನ್ ಚಾಲೀಸ 40 ಶ್ಲೋಕಗಳನ್ನು ನಿರರ್ಗವಾಗಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗಡಿಗಳ್ಳಿ ಗ್ರಾಮದ ಮಧುಸೂದನ್-ಸುಪ್ರಿಯಾ ದಂಪತಿಯ ಪುತ್ರ ಇಶನ್ ಕೃಷ್ಣ ತನ್ನ ಅಭೂತಪೂರ್ವ ನೆನಪಿನ ಶಕ್ತಿಯಿಂದ ಆಸ್ತಿಕ ಸಮೂಹ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.
ಫೆಬ್ರವರಿ 9, 2022ರಂದು ಜನಿಸಿದ ಇಶನ್, ಕೇವಲ 2 ನಿಮಿಷ 53 ಸೆಕೆಂಡ್ಗಳಲ್ಲಿ ಹನುಮಾನ್ ಚಾಲೀಸಾದ ಸಂಪೂರ್ಣ 40 ಶ್ಲೋಕಗಳನ್ನು ನಿರರ್ಗಳವಾಗಿ ಪಠಿಸಿ ಕೇಳುಗರನ್ನು ಅಚ್ಚರಿಗೊಳಿಸಿದ್ದಾನೆ. ಮಗುವಿನ ಏಕಾಗ್ರತೆ, ನಿರಂತರ ಅಭ್ಯಾಸ ಮತ್ತು ಹೆತ್ತವರ ಪ್ರೋತ್ಸಾಹ ಈ ಸಾಧನೆಗೆ ಕಾರಣವಾಗಿದೆ. ಈ ಅಪರೂಪದ ಪ್ರತಿಭೆಗೆ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಕಲಾಂಸ್ ವರ್ಲ್ಡ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ನಂತಹ ಪ್ರಮುಖ ದಾಖಲೆಗಳ ಪಟ್ಟಿಯಲ್ಲಿ ಈತನ ಹೆಸರು ಸೇರ್ಪಡೆಯಾಗಿದೆ.
ಈ ಪುಟ್ಟ ಸಾಧಕನಿಗೆ ಸ್ಪಿರಿಚುಯಲ್ ಜೀನಿಯಸ್ ಆಫ್ ದಿ ಇಯರ್ 2026, ಹೆಮ್ಮೆಯ ಕನ್ನಡಿಗ 2026, ಸ್ವಾಮಿ ವಿವೇಕಾನಂದ ಗ್ಲೋಬಲ್ ಐಕಾನ್ ಅವಾರ್ಡ್, ಭಾರತ ರತ್ನ ಲೆಗಸಿ ಅವಾರ್ಡ್ ಮತ್ತು ಮದರ್ ತೆರೇಸಾ ಹ್ಯುಮಾನಿಟೇರಿಯನ್ ಸರ್ವಿಸ್ ಅವಾರ್ಡ್ ನಂತಹ ಹಲವಾರು ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವಗಳು ಒಲಿದು ಬಂದಿವೆ.
ಸನಾತನ ಸಂಸ್ಕೃತಿ ಮತ್ತು ಶ್ಲೋಕ ಪಠಣದಲ್ಲಿ ಹೊಸ ಪೀಳಿಗೆಗೆ ಮಾದರಿಯಾಗಿರುವ ಇಶನ್ಗೆ ನಾಡಿನಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.








