- Advertisement -
- Advertisement -



ವಿಟ್ಲ: ಕೇವಲ 1 ವರ್ಷ 10 ತಿಂಗಳ ವಯಸ್ಸಿನಲ್ಲಿಯೇ 30ಕ್ಕೂ ಹೆಚ್ಚು ಕನ್ನಡ ಮತ್ತು ತುಳು ಹಾಡುಗಳನ್ನು ಹಾಗೂ ಶ್ಲೋಕಗಳನ್ನು ನೆನಪಿನಿಂದ ಹಾಡುವ ಮೂಲಕ ಪುಟ್ಟ ಬಾಲಕಿ ಕ್ರಿಷ ಚೇತನ್ ವಿಶೇಷ ಸಾಧನೆ ಮಾಡಿದ್ದಾಳೆ.
ಈ ಪ್ರತಿಭೆಯನ್ನು ಗುರುತಿಸಿ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು 2026ರ ಅಕ್ಟೋಬರ್ 17ರಂದು ಅಧಿಕೃತವಾಗಿ ಮಾನ್ಯತೆ ನೀಡಿದೆ.
ಸಂಗೀತದಲ್ಲಿ ಅತೀವ ಆಸಕ್ತಿ ಹೊಂದಿರುವ ಕ್ರಿಷ ಚೇತನ್, ವಿಟ್ಲ ನಿವಾಸಿಗಳಾದ ಚೇತನ್ ಕೆ. ವಿಟ್ಲ ಹಾಗೂ ರಮ್ಯ ದಂಪತಿಯ ಪುತ್ರಿಯಾಗಿದ್ದಾಳೆ.
ಪುಟ್ಟ ವಯಸ್ಸಿನಲ್ಲಿಯೇ ಇಂತಹ ಸಾಧನೆ ಮಾಡಿರುವ ಕ್ರಿಷ ಚೇತನ್ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಈ ಪುಟಾಣಿ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸುತ್ತಾ ಈ ಪುಟ್ಟ ಪ್ರತಿಭೆಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಉಜ್ವಲ ಭವಿಷ್ಯಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.
- Advertisement -








