ಮಂಗಳೂರು: ಮಂಗಳೂರಿನ ಸುರತ್ಕಲ್ ನ ಟೋಲ್ ಸಿಬ್ಬಂದಿಗೆ ಏಳು ಮಂದಿ ಕಾರು ಸವಾರರು ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ.
ಭಟ್ಕಳ ರಿಜಿಸ್ಟ್ರೇಷನ್ ನಂಬರ್ ನ ಕಾರು ಸುರತ್ಕಲ್ ಟೋಲ್ ನಲ್ಲಿ ಹಣ ಪಾವತಿಸಲು ನಿರಾಕರಿಸಿದ್ದರು.ಈ ವೇಳೆ ಟೋಲ್ ಸಿಬ್ಬಂದಿ ಹಣ ಪಾವತಿಸಲು ತಿಳಿಸಿದ್ದು, ಹಣ ಪಾವತಿ ಮಾಡೋದಿಲ್ಲ ಎಂದು ತಗಾದೆ ತೆಗೆದು ಟೋಲ್ ಸಿಬ್ಬಂದಿಗೆ ಏಳು ಮಂದಿ ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಹಲ್ಲೆಯಿಂದಾಗಿ ಟೋಲ್ ಸಿಬ್ಬಂದಿಯ ಕೈ ಮುರಿತಕ್ಕೊಳಗಾಗಿದ್ದು ಬಳಿಕ ಹಲ್ಲೆ ನಡೆಸಿದ ಆರೋಪಿಗಳು ಕಾರಿನ ಸಮೇತ ಪರಾರಿಯಾಗಿದ್ದಾರೆ. ಹಲ್ಲೆಯ ದೃಶ್ಯ ಟೋಲ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಟೋಲ್ ಆಫೀಸ್ ಗೆ ನುಗ್ಗಲು ಯತ್ನಿಸಿದ್ದು ಮತ್ತು ಆಫೀಸ್ ಸಿಬ್ಬಂದಿಯು ಇದನ್ನು ತಡೆಯಲು ಯತ್ನ ನಡೆಸಿದ್ದು ಇದು ಕೂಡಾ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಈ ಟೋಲ್ 42 ಸಿಸಿ ಕ್ಯಾಮರಗಳನ್ನು ಹೊಂದಿದೆ. ಯಾವುದೇ ಪೊಲೀಸ್ ತನಿಖೆ ಗೆ ಸಿಸಿ ಕ್ಯಾಮೆರಾ ಸಹಕಾರಿ ಆಗುವ ಟೋಲ್ ಇದಾಗಿದೆ. ಘಟನೆಯ ಬಗ್ಗೆ NHAI ಟೋಲ್ ಸಿಬ್ಬಂದಿಗಳು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.