Thursday, July 30, 2026
spot_imgspot_img
spot_imgspot_img

ಕೆಂಪೇಗೌಡ ಏರ್ ಪೋರ್ಟ್ ಗೆ ರೈಲು ಸೇವೆ ಪ್ರಾರಂಭ – ಕೇವಲ 10 ರೂ. ಗೆ ವಿಮಾನ ನಿಲ್ದಾಣ ತಲುಪಬಹುದು!

- Advertisement -
- Advertisement -

ಬೆಂಗಳೂರು: ಕೆಂಪೇಗೌಡ ಅಂತರ್​​ರಾಷ್ಟ್ರೀಯ ವಿಮಾನ ದೇಶದಲ್ಲೇ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದು. ಇಲ್ಲಿಗೆ ತಲುಪಲು ಸ್ಪೆಷಲ್ ಬಸ್​ಗಳ ಸೇವೆ, ಕ್ಯಾಬ್​ಗಳ ಅನುಕೂಲ ಇದೆ. ಮೆಟ್ರೋ ನಿರ್ಮಾಣವೂ ಆಗುತ್ತಿದೆ.

ಇದೀಗ ಉಪನಗರ ರೈಲು ಯೋಜನೆ ಅಡಿಯಲ್ಲಿ ರೈಲು ಸೇವೆಯೂ ಪ್ರಯಾಣಿಕರಿಗೆ ಲಭ್ಯವಾಗಲಿದೆ.ವಿಮಾನ ನಿಲ್ದಾಣಕ್ಕೆ ತಲುಪಲು ಇನ್ಮೇಲೆ ರೈಲು ಸೇವೆಯೂ ಲಭ್ಯವಾಗಲಿದೆ. ಅದೂ ಕೂಡ ಕೇವಲ ಹತ್ತು ರೂಪಾಯಿ ದರದಲ್ಲಿ. ಏರ್​ಪೋರ್ಟ್​ನಿಂದ 2 ಕಿ.ಮಿ. ದೂರದಲ್ಲಿ ರೈಲ್ವೇ ಹಾಲ್ಟ್​​ಸ್ಟೇಷನ್ ನಿರ್ಮಾಣ ಮಾಡಲಾಗಿದ್ದು. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಶಟಲ್ ಬಸ್ಸುಗಳ ಮೂಲಕ ತಲುಪುವ ವ್ಯವಸ್ಥೆ ಮಾಡಲಾಗಿದೆ.

ಎಲ್ಲೆಲ್ಲಿಂದ ಈ ಸೇವೆ ಲಭ್ಯವಿರಲಿದೆ ಅನ್ನೋದನ್ನ ನೋಡೋದಾದ್ರೆ.
ಉಪನಗರ ರೈಲು ಆರಂಭ: ಮೆಜೆಸ್ಟಿಕ್​​ ರೈಲು ನಿಲ್ದಾಣ, ಬಂಗಾರಪೇಟೆಯಿಂದ ತಲಾ ಎರಡು, ಯಲಹಂಕ-ಯಶವಂತಪುರ ಹಾಗೂ ಬೆಂಗಳೂರು ಕಂಟೋನ್ಮೆಂಟ್‌ನಿಂದ ತಲಾ ಒಂದು ರೈಲು ಈ ಮಾರ್ಗದಲ್ಲಿ ಸಂಚಾರ ಮಾಡಲಿದೆ. ಪ್ರಾರಂಭಿಕ ಹಂತದಲ್ಲಿ ಹತ್ತು ರೈಲುಗಳು ಸಂಚಾರ ಆರಂಭಿಸಲಿವೆ. ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ರೈಲುಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ.

ವಿಮಾನ ನಿಲ್ದಾಣದಿಂದ ಯಾವ ಅವಧಿಯಲ್ಲಿ ಹೆಚ್ಚು ವಿಮಾನಗಳು ಬಂದಿಳಿಯುತ್ತವೆ ಹಾಗೂ ಹಾರಾಟ ನಡೆಸಲಿವೆ ಎಂಬ ಆಧಾರದ ಮೇಲೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.ಹೆಚ್ಚು ವಿಮಾನಗಳು ಸಂಚರಿಸುವ ಅವಧಿಗೂ ಮುಂಚೆ ರೈಲುಗಳು ಹಾಲ್ಟ್​​ಸ್ಟೇಷನ್‌ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಈ ರೈಲುಗಳು 2,402 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿವೆ. ರೈಲಿನ ಪ್ರತಿ ಬೋಗಿಯು 84 ಆಸನಗಳು ಸೇರಿ 325 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಮೆಜೆಸ್ಟಿಕ್ ನಿಲ್ದಾಣದಿಂದ ಹಾಲ್ಟ್​​ಸ್ಟೇಷನ್‌ಗೆ ತಲುಪಲು 50 ನಿಮಿಷ ಸಾಕು. ಟಿಕೆಟ್‌ ದರ ಬಹಳ ಕಡಿಮೆ ಇರುವುದರಿಂದ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಇನ್ನು ಬೆಂಗಳೂರು ನಗರ- ವಿಮಾನ ನಿಲ್ದಾಣದ ನಡುವೆ ವಿಶೇಷವಾಗಿ ಮೂರು ಜೋಡಿ ಡೆಮೊ ರೈಲುಗಳು ಸಂಚರಿಸಲಿವೆ. ವಾರದಲ್ಲಿ ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನ ಈ ಸೇವೆ ಇರಲಿದೆ. ಹೀಗಾಗಿ ಇನ್ಮುಂದೆ ಏರ್​ಪೋರ್ಟ್​ಗೆ ಹೋಗೋಕೆ ಸಾವಿರಾರು ರೂಪಾಯಿ ಖರ್ಚು ಮಾಡೋ ಅಗತ್ಯವಿಲ್ಲ. ಕೇವಲ​ 10ರೂಪಾಯಿಯಲ್ಲಿ ವಿಮಾನ ನಿಲ್ದಾಣ ತಲುಪಬಹುದು.

- Advertisement -

Related news

error: Content is protected !!