- Advertisement -
- Advertisement -



ಮುಂಬೈ: ವಿಮಲ್ ಪಾನ್ ಮಸಾಲಾ/ ವಿಮಲ್ ಇಲೈಚಿ ಜಾಹೀರಾತಿಗೆ ಸಂಬಂಧಿಸಿಂತೆ ಬಾಲಿವುಡ್ ನಟರಾದ ಶಾರೂಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿರುವ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಅದಕ್ಕೆ ಸಂಬಂಧಿಸಿದ ಪ್ರಚಾರ ಜಾಹೀರಾತು ಪೋಸ್ಟ್ ಗಳನ್ನು 15 ದಿನಗಳೊಳಗಾಗಿ ತೆಗೆದು ಹಾಕುವಂತೆ ಸೂಚನೆ ನೀಡಿದೆ.

ಶುಕ್ರವಾರ ಈ ಕುರಿತು ನೋಟಿಸ್ ಜಾರಿಗೊಳಿಸಲಾಗಿದ್ದು, ಸೂಚನೆಗಳನ್ನು ಪಾಲಿಸದಿದ್ದರೆ, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006ರ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.ಆಹಾರ ಪದಾರ್ಥಗಳ ಕುರಿತು ದಾರಿ ತಪ್ಪಿಸುವ ಜಾಹೀರಾತು ನೀಡಿರುವ ಹಿನ್ನೆಲೆ ನಿರ್ಬಂಧ ವಿಧಿಸಲಾಗಿದೆ ಎಂದು ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ತನ್ನ ನೋಟಿಸ್ ನಲ್ಲಿ ಉಲ್ಲೇಖಿಸಿದೆ.ಈ ನೋಟಿಸ್ ಅನ್ನು ನಿರ್ದಿಷ್ಟವಾಗಿ ವಿಮಲ್ ಬ್ಯಾಂಡ್ ನ ಪಾನ್ ಮಸಾಲಾ/ವಿಮಲ್ ಇಲೈಚಿಗೆ ಸಂಬಂಧಿಸಿದ ಪ್ರಚಾರ ಜಾಹೀರಾತಿನಲ್ಲಿ ಪಾಲ್ಗೊಂಡಿರುವುದಕ್ಕೆ ಸಂಬಂಧಿಸದಿಂತೆ ಜಾರಿಗೊಳಿಸಲಾಗಿದೆ.
- Advertisement -








