- Advertisement -
- Advertisement -





ನವದೆಹಲಿ: ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಹೋಟೆಲ್ ಮಾಲೀಕರು ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಬೆಲೆ ಏರಿಕೆ ಶಾಕ್ ನೀಡಿದ್ದು, ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಮೇಲಿನ ದರವನ್ನು ಹೆಚ್ಚಿಸಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿಯ ಪ್ರಕಾರ, ಕಮರ್ಷಿಯಲ್ ಸಿಲಿಂಡರ್ ದರದಲ್ಲಿ 9.50 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಆದರೆ ಗೃಹ ಬಳಕೆದಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. 14 ಕೆಜಿ ತೂಕದ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ಇಲ್ಲ, ಜೊತೆಗೆ 5 ಕೆಜಿ, 10 ಕೆಜಿ ಸಿಲಿಂಡರ್ ಬೆಲೆಯಲ್ಲೂ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿದುಬಂದಿದೆ.
- 5 ಕೆಜಿ ಸಾಮಾನ್ಯ ಎಲ್ಪಿಜಿ ಸಿಲಿಂಡರ್ ಬೆಲೆ 349.50 ರೂ. ಆಗಿಯೇ ಮುಂದುವರಿದಿದೆ.
- 5 ಕೆಜಿ XTRALITE ಸಿಲಿಂಡರ್ ದರ 339 ರೂ.ಗೆ ಸ್ಥಿರವಾಗಿದೆ.
- 5 ಕೆಜಿ ನಾನ್-ಡೊಮೆಸ್ಟಿಕ್ ಸಿಲಿಂಡರ್ ಬೆಲೆ ಮಾತ್ರ 762 ರಿಂದ 764 ರೂ.ವರೆಗೆ ಏರಿಕೆಯಾಗಿದೆ.
- Advertisement -







