Tuesday, September 1, 2026
spot_imgspot_img
spot_imgspot_img

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್ ಮೀಟ್ ಮಾಡಲು ಬಂದ ಹಕೀಂ ಕೂರ್ನಡ್ಕ

- Advertisement -
- Advertisement -

ಶಾಸಕರ ಬೆಂಬಲಿಗರಿಂದ ಪ್ರೆಸ್ ಮೀಟ್ ಒಳಗೆ ನುಗ್ಗಲು ಯತ್ನ; ಪೊಲೀಸರಿಂದ ತಡೆ

ಪುತ್ತೂರು: ಹಕೀಂ ಕೂರ್ನಡ್ಕ ವಿರುದ್ಧ ಪುತ್ತೂರು ಶಾಸಕ ಅಶೋಕ್ ಕುಮಾರ್‍ ರೈ ಅಭಿಮಾನಿಗಳೆಂದು ಎನ್ನಲಾದ ತಂಡವೊಂದು ಗುಂಪುಗೂಡಿ ದಿಕ್ಕಾರ ಕೂಗಿದ ಹಾಗೂ ಮಾತಿನ ಚಕಮಕಿ ನಡೆಸಿದ ಘಟನೆ ಮಂಗಳವಾರ ಮಧ್ಯಾಹ್ನ ಪುತ್ತೂರು ಪ್ರೆಸ್ ಕ್ಲಬ್ ಬಳಿ ನಡೆದಿದೆ.

ಹಕೀಂ ಕೂರ್ನಡ್ಕ ಅವರು ಪತ್ರಿಕಾಗೋಷ್ಠಿ ನಡೆಸಲು ಪುತ್ತೂರು ಪ್ರೆಸ್ ಕ್ಲಬ್‌ಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಹಕೀಂ ಕೂರ್ನಡ್ಕ ಅವರು ಪ್ರೆಸ್ ಕ್ಲಬ್‌ನೊಳಗೆ ಇದ್ದ ಸಂದರ್ಭದಲ್ಲಿ ಹೊರಭಾಗದಲ್ಲಿ ತಂಡವೊಂದು ಜಮಾವಣೆಗೊಂಡು ಕೂಗಾಟ ನಡೆಸಿದೆ. ಅಲ್ಲದೆ, ಹೊರಗೆ ಬರುವಂತೆ ಅವರನ್ನು ಕರೆಯಲಾಗಿದೆ. ಎಂದು ತಿಳಿದುಬಂದಿದೆ.

ಶಾಸಕರ ಬೆಂಬಲಿಗರ ಈ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -

Related news

error: Content is protected !!