




ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಮಾಫಿ ಸಾಕ್ಷಿ ಹೇಳಿಕೆ ಸಂಬಂಧ ದರ್ಶನ್ ಸಲ್ಲಿಸಿರೋ ಅರ್ಜಿ ವಿಚಾರಣೆ ನಡೆಯುವ ಹಿನ್ನೆಲೆ ಸೆಷನ್ಸ್ ಕೋರ್ಟ್ ಪ್ರದೋಶ್ ಹೇಳಿಕೆ ದಾಖಲು ಮಾಡುವ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಿ ಆದೇಶ ನೀಡಿದೆ. ಹೇಳಿಕೆ ದಾಖಲು ಮಾಡಲು ಕೋರ್ಟ್ಗೆ ಬಂದ ಪ್ರದೋಶ್ ಕೈಯಲ್ಲಿ ಸಾಕ್ಷಿ ಪುಸ್ತಕವಿತ್ತು, ಇದನ್ನು ಆರೋಪಿ ಪ್ರದೋಶ್ ಮಾಧ್ಯಮಗಳ ಕ್ಯಾಮೆರಾಗೆ ತೋರಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೇಳಿಕೆ ದಾಖಲು ಪ್ರಕ್ರಿಯೆಗೆಂದು ಕೋರ್ಟ್ಗೆ ಬಂದಿದ್ದ ಪ್ರದೋಷ್ನನ್ನು ಜೈಲಿಗೆ ವಾಪಸ್ ಕರೆದೊಯ್ದಿದ್ದಾರೆ. ಜೀಪ್ನಲ್ಲಿ ಎವಿಡೆನ್ಸ್ ಜೊತೆಗೆ ಕೂತಿದ್ದ ಪ್ರದೋಶ್ ಕ್ಯಾಮೆರಾ ಕಂಡು ಥಮ್ಸ್ ಅಪ್ ಮಾಡಿ, ಬಳಿಕ ಮಾಧ್ಯಮದವರಿಗೆ ಧನ್ಯವಾದ ಹೇಳಿದ್ದಾನೆ ಎನ್ನಲಾಗುತ್ತಿದೆ.
ಪ್ರದೂಷ್ ಮಾಫಿ ಸಾಕ್ಷಿ ದಾಖಲು ಪ್ರಕ್ರಿಯೆಗೆ ತಡೆ ಕೋರಿ ಸಲ್ಲಿಕೆಯಾದ ಅರ್ಜಿ ಆದೇಶ ಇಂದು ಹೊರಬೀಳಿದ್ದು, ಹೈಕೋರ್ಟ್ ಆದೇಶದತ್ತ ಕುತೂಹಲ ಹೆಚ್ಚಿದೆ. ಮಾಫಿ ಸಾಕ್ಷಿಗೆ ಒಪ್ಪಿಗೆ ಸಿಗುತ್ತಾ ಅಥವಾ ತಡೆ ಆಗುತ್ತಾ? ಇಲ್ಲವಾದಲ್ಲಿ ಮಾಫಿ ಸಾಕ್ಷಿ ಕುರಿತಾಗಿ ನಿಯಮದ ಅನುಸರಣೆ ಬಗ್ಗೆ ಆದೇಶವಾಗುತ್ತಾ? ಅನ್ನೋ ಕುತೂಹಲ ಮನೆ ಮಾಡಿದ್ದು, ಜೈಲಿನಲ್ಲಿರೋ ದರ್ಶನ್ಗೂ ಭಯ ಶುರುವಾಗಿದೆ.
ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆಗೆ ತಡೆ ನೀಡುವಂತೆ ಅರ್ಜಿ ದರ್ಶನ್ ಪರ ವಕೀಲರು ಸಲ್ಲಿಸಿರುವ ಅರ್ಜಿ ಬಗ್ಗೆ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಪೀಠದಲ್ಲಿ ಆದೇಶ ಹೊರಬೀಳಲಿದೆ. ನಿನ್ನೆ ಅರ್ಜಿ ಸಂಬಂಧ ದರ್ಶನ್ ಪರ ವಾದಿಸಿದ್ದ ಹಿರಿಯ ವಕೀಲ ಹಶ್ಮತ್ ಪಾಷ ಅವ್ರು ಮಾಫಿ ಸಾಕ್ಷಿ ಅರ್ಜಿ ಸ್ವೀಕಾರಕ್ಕೂ ಮುನ್ನ ಜೈಲು ಅಧಿಕಾರಿಗಳ ವರದಿ ಕೇಳಿದ್ದಾರೆ ಎಂಬ ವಿಚಾರವನ್ನ ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಜೈಲು ಅಧಿಕಾರಿಗಳ ವರದಿಯಲ್ಲಿ ನಡವಳಿಕೆ ಸರಿಯಿದೆ ಎಂದು ತಿಳಿಸಿದ್ದಾರೆ. ಇನ್ನುಆರೋಪಿಯ ಅಫಿಡವಿಟ್ ಸಾಕಾಗಿತ್ತು. ಜೈಲು ಅಧಿಕಾರಿಗಳ ವರದಿ ಅಗತ್ಯವಿರಲಿಲ್ಲ. ಪ್ರಾಸಿಕ್ಯೂಷನ್ ಕೂಡ ಜೈಲು ಅಧಿಕಾರಿಗಳ ವರದಿ ಪಡೆಯುವಂತೆ ಕೇಳಿರಲಿಲ್ಲ. ಸೆಷನ್ಸ್ ಕೋರ್ಟ್ ಸ್ವಯಂಪ್ರೇರಿತವಾಗಿ ವರದಿ ಪಡೆದುಕೊಂಡಿದೆ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ದಾರೆ.
ದೋಷ್ ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ(CCH-59) ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ(CrPC) ಸೆಕ್ಷನ್ 307ರ ಅಡಿಯಲ್ಲಿ 11 ಪುಟಗಳ ಅರ್ಜಿ ಸಲ್ಲಿಸಿದರು. ಅರ್ಜಿಯಲ್ಲಿ, ಆಪಾದಿತ ಕೊಲೆ, ಸಾಕ್ಷ್ಯಗಳ ವಿಲೇವಾರಿ ಮತ್ತು ಎಲ್ಲ ಸಹ-ಆರೋಪಿಗಳ ಪಾತ್ರಗಳ ಬಗ್ಗೆ ‘ಪೂರ್ಣ ಮತ್ತು ಸತ್ಯ’ವನ್ನು ಹೇಳುವುದಾಗಿ ಪ್ರಸ್ತಾಪಿಸಿರುವುದಾಗಿ ತಿಳಿದುಬಂದಿದೆ.








