- Advertisement -
- Advertisement -





ವಿಟ್ಲ: ರಾಮಮಂದಿರ ಹನುಮಗಿರಿ ವಿಟ್ಲದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಕರ್ನಾಟಕ ರಾಜ್ಯ ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಸುದರ್ಶನ ಪಡಿಯಾರ್ ವಿಟ್ಲ ಇವರನ್ನು ಗೌರವಿಸಲಾಯಿತು.
ಸಮಾಜದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುದರ್ಶನ ಪಡಿಯಾರ್ ವಿಟ್ಲ ಅವರಿಗೆ ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಸುಭಾಷ್ ಚಂದ್ರ ನಾಯಕ್, ಎಂ. ರಾಧಾಕೃಷ್ಣ ನಾಯಕ್, ಎಂ. ನಿತ್ಯಾನಂದ ನಾಯಕ್, ಪಿ. ಶ್ರೀಧರ್ ಪೈ, ನವನೀತ ಭಟ್, ಪ್ರದೀಪ್ ಭಟ್, ಕೃಷ್ಣಪ್ರಸಾದ್, ಸುಧೀರ್ ಭಟ್, ಎಂ. ಹರೀಶ್ ನಾಯಕ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
- Advertisement -








