Saturday, October 3, 2026
spot_imgspot_img
spot_imgspot_img

ಬಂಟ್ವಾಳ: ಕಾಂಗ್ರೆಸ್ ವಿಜೇತ ಅಭ್ಯರ್ಥಿಗಳ, ಕಾರ್ಯಕರ್ತರ ಬೃಹತ್ ರೋಡ್ ಶೋ

- Advertisement -
- Advertisement -

ಬಂಟ್ವಾಳ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಿಂದ ನಿನ್ನೆ ಸಂಜೆ ಗೂಡಿನಬಳಿ ಬಿಸಿರೋಡು ರಾಜಬೀದಿಯಲ್ಲಿ ಬೃಹತ್‌ ರೋಡ್ ಶೋ ನಡೆಯಿತು.

ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಭರ್ಜರಿ ಜಯ ದಾಖಲಿಸಿದ್ದು ಅದರ ಪ್ರಯುಕ್ತ ವಿಜಯೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೆರವಣಿಗೆಯು ಗೂಡಿನಬಳಿ, ಬಿಸಿ ರೋಡ್ ಮುಖಾಂತರ ಸಾಗಿ ಸಾಗರ್ ಹಾಲ್ ನಲ್ಲಿ ಸಮಾಪ್ತಿಗೊಂಡಿತು.ನಂತರ ಪಕ್ಷದ ವಿಜೇತ ಅಭ್ಯರ್ಥಿಳಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್,ಮುಖ್ಯ ಸಚೇತಕ ನಾರಾಯಣ ಸ್ವಾಮಿ, ರಮಾನಾಥ ರೈ, ಬಿಎಚ್ ಬಿ ಖಾದರ್,ಎಂಎಸ್ ಮೊಹಮ್ಮದ್,ಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್,ಅಬ್ಬಾಸ್ ಆಲಿ,ಬೇಬಿ ಕುಂದರ್,ಸುದೀಪ್ ಮಾಣಿ ಹಾಗೂ ಇತರ ಗಣ್ಯರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- Advertisement -

Related news

error: Content is protected !!