Saturday, October 3, 2026
spot_imgspot_img
spot_imgspot_img

ಕಸದ ಘಟಕದಲ್ಲಿ ಹೃದಯ ವಿದ್ರಾವಕ ದುರಂತ: ಯಂತ್ರಕ್ಕೆ ಸಿಲುಕಿ ಕೈ-ಕಾಲು ತುಂಡಾಗಿ ಮಹಿಳೆ ಸಾವು

- Advertisement -
- Advertisement -

ಚಿಕ್ಕಬಳ್ಳಾಪುರ: ಕಸ ವಿಂಗಡನೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ಘಟಕದಲ್ಲಿ ನಡೆದಿದೆ.

ಕಾಡತಿಪ್ಪೂರು ಮೂಲದ ಅರಸಮ್ಮ(45) ಮೃತ ದುರ್ದೈವಿ. ಯಂತ್ರದ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮಹಿಳೆ ಸಿಲುಕಿ ಸಾವನ್ನಪ್ಪಿದ್ದಾರೆ. ಯಂತ್ರಕ್ಕೆ ಮಹಿಳೆ ಸಿಲುಕಿದ ಪರಿಣಾಮ, ಕೈ ಕಾಲು ತುಂಡಾಗಿ ಬಿದ್ದಿದ್ದವು.

ಮಹಿಳೆ ಈ ಘಟಕದಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನ ಕಸವನ್ನ ತಂದು ಈ ಘಟಕದಲ್ಲಿ ವಿಂಗಡಣೆ ಮಾಡಲಾಗುತ್ತಿತ್ತು. ಇಂದು (ಅ.2) ಬೆಳಗ್ಗೆ ಕಸ ವಿಂಗಡಣೆ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ

ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ.

- Advertisement -

Related news

error: Content is protected !!