




ವಿಟ್ಲ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪುತ್ತೂರು – ವಿಟ್ಲ ಘಟಕ, ರೋಟರಿ ಕ್ಲಬ್ ಪುತ್ತೂರು (ಈಸ್ಟ್) ಮತ್ತು ರೋಟರಿ ಕ್ಲಬ್ ವಿಟ್ಲ ಸಮರ್ಪಣ್ ವಿಟ್ಲ ಇವರ ಆಶ್ರಯದಲ್ಲಿ, ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಭ ಟ್ರಸ್ಟ್ (ರಿ), ನಿಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರವು ಸೆ.13 ಆದಿತ್ಯವಾರದಂದು ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.00 ರವರೆಗೆ ನಡೆಯುವ ಶಿಬಿರವು ನಡೆಯಲಿದ್ದು, ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನೆಯನ್ನು ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷರಾದ ಜಗನ್ನಾಥ ಸಾಲ್ಯಾನ್ ನೆರವೇರಿಸಲಿದ್ದಾರೆ. ಪುತ್ತಿಲ ಪರಿವಾರ ಸೇವಾ ಟ್ರಸ್ಟ್(ರಿ.) ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆ ಕೃಷ್ಣಯ್ಯ ಕೆ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಸಮರ್ಪಣ್ ವಿಟ್ಲ ಅಧ್ಯಕ್ಷ ಯಶವಂತ ಪೂಜಾರಿ ನಿಡ್ಯ, ಉದ್ಯಮಿ ಲಯನ್ ಪ್ರಭಾಕರ ಶೆಟ್ಟಿ ದಂಬೆಕಾನ, ಭರತ್ ಕನ್ಸ್ಟ್ರಕ್ಷನ್ ವಿಟ್ಲದ ಭಾಸ್ಕರ್ ರೈ, ನೋಟರಿ ವಕೀಲ ಶ್ರೀಕೃಷ್ಣ ಕೇಪು, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ವೈದ್ಯಾಧಿಕಾರಿ ಡಾ. ಸೀತಾರಾಮ ಭಟ್, ರೋಟರಿ ಕ್ಲಬ್ ಪುತ್ತೂರು (ಈಸ್ಟ್) ಅಧ್ಯಕ್ಷ ರೋ| ರವಿಕುಮಾರ್ ರೈ ಮಠ, ರೋಟರಿ ಕ್ಲಬ್ ವಿಟ್ಲ ಅಧ್ಯಕ್ಷ ರೋ|ಕ್ಯಾಪ್ಟನ್ ದಾಸಪ್ಪ ಪೂಜಾರಿ ಎನ್, ಹಿರಿಯ ಸ್ವಯಂಸೇವಕ ಸುಬ್ರಹ್ಮಣ್ಯ ಭಟ್ ಸೇರಾಜೆ, ಸತ್ಯಸಾಯಿ ಸೇವಾ ಸಮಿತಿ ಮಂಗಳೂರು ಸಂಚಾಲಕ ಬಿ. ದೇವಾನಂದ ರೈ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ ಅಧ್ಯಕ್ಷ ಮೋಹನ್ ಸೇರಾಜೆ ಸೇರಿದಂತೆ ಕೆ.ಎಸ್. ಹೆಗ್ಡೆ ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆಯ ಪ್ರಭಾರ ವೈದ್ಯಾಧಿಕಾರಿಗಳು ಭಾಗವಹಿಸಲಿದ್ದಾರೆ.
ಶಿಬಿರದ ವಿಶೇಷತೆ:
ಕಿವಿ, ಮೂಗು, ಗಂಟಲು(ENT) ತಪಾಸಣೆ, ಸಕ್ಕರೆ ಕಾಯಿಲೆ ತಪಾಸಣೆ, ಕಣ್ಣು ಪರೀಕ್ಷೆ ಹಾಗೂ ಉಚಿತ ಕನ್ನಡಕ, ಎಲುಬು ಮತ್ತು ಚರ್ಮ ತಪಾಸಣೆ, ದಂತ ಪರೀಕ್ಷೆ ಹಾಗೂ ಚಿಕಿತ್ಸೆ (ಫಿಲ್ಲಿಂಗ್), ಇ.ಸಿ.ಜಿ. ಹಾಗೂ ಮಕ್ಕಳ ತಪಾಸಣಾ ವಿಭಾಗದ ಸೌಲಭ್ಯ ಇರಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಕ್ಲಬ್ ಪುತ್ತೂರು (ಈಸ್ಟ್) ಮತ್ತು ರೋಟರಿ ಕ್ಲಬ್ ವಿಟ್ಲ, ಸಮರ್ಪಣ್ ವಿಟ್ಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ವಿಟ್ಲ ಘಟಕ, ಶ್ರೀ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಭ ಟ್ರಸ್ಟ್ (ರಿ) ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








