





ಚಂದಳಿಕೆ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಚಂದಳಿಕೆ, ವಿಟ್ಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ, ಚಂದಳಿಕೆ-ವಿಟ್ಲ ಇದರ ಆಶ್ರಯದಲ್ಲಿ 28ನೇ ವರ್ಷದ ಶ್ರೀ ಗಣೇಶೋತ್ಸವವು ಚಂದಳಿಕೆ ,ಶ್ರೀ ರಾಮನಗರದಲ್ಲಿರುವ ಮಂಗಳಾ ಮಂಟಪದಲ್ಲಿ ಸೆಪ್ಟೆಂಬರ್ 14 ಸೋಮವಾರ ಮತ್ತು 15 ಮಂಗಳವಾರ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ಸೆ. 14 ಸೋಮವಾರದಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, 9.15ಕ್ಕೆ ಶ್ರೀ ಉದಯೇಶ ಕೆದಿಲಾಯ ಅವರಿಂದ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ವಿಗ್ರಹವನ್ನು ದಿ| ದಾಮೋದರ ಪೂಜಾರಿ ನಿಡ್ಯ ಇವರ ಸ್ಮರಣಾರ್ಥ ಮಕ್ಕಳಾದ ನಿಖಿಲ್ ಸಾಲ್ಯಾನ್ ಮತ್ತು ಪೂಜಿತ್ ಸಾಲ್ಯಾನ್ ಅವರು ಕೊಡುಗೆಯಾಗಿ ನೀಡಿದ್ದಾರೆ.
ಬೆಳಿಗ್ಗೆ ಉದ್ಘಾಟನೆಯನ್ನು ಶ್ರೀಮತಿ ಸುಮತಿ ಶಂಕರ ಭಟ್ ಬದನಾಜೆ ಅವರು ನೆರವೇರಿಸಲಿದ್ದು, ಮನೋರಂಜನ್, ಭೂಮಿ ಸ್ಟೋನ್ ಇಂಡಸ್ಟ್ರೀಸ್ ವಿಟ್ಲ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.
11 ಗಂಟೆಗೆ ಧೂಮಾವತಿ ಸ್ವ-ಸಹಾಯ ಸಂಘ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದವರಿಂದ ಭಜನೆ, ಬಳಿಕ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ.
ಸಂಜೆ 5 ಗಂಟೆಗೆ ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿ ಕಬಕ ಇವರಿಂದ ಭಜನೆ. 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ-ಕಂಬಳಬೆಟ್ಟು ಇವರಿಂದ “ನೃತ್ಯ ಸಂಗೀತ ಹಾಗೂ ಸಂಸ್ಕೃತಿಯ ಸಂಗಮ” – ನಿರ್ದೇಶನ ಜೈದೀಪ್ ಅಮೈ.
ರಾತ್ರಿ 8 ಗಂಟೆಗೆ ಮಾಜಿ ಸೈನಿಕರಾದ ಬಿ.ಕೆ ರಮೇಶ್ ಅವರಿಂದ ಬಹುಮಾನ ವಿತರಣೆ, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸೆ. 15 ಮಂಗಳವಾರದಂದು ಬೆಳಿಗ್ಗೆ 8-00ಕ್ಕೆ: ಗಣಪತಿ ಹೋಮ, 8-30ಕ್ಕೆ ಬೆಳಗಿನ ಪೂಜೆ, 9-00ಕ್ಕೆ ವಿಶ್ವನಾಥ ದೇವಾಡಿಗ ಮತ್ತು ಬಳಗ ವಿಟ್ಲ ಇವರಿಂದ ಭಜನೆ ನಡೆಯಲಿದೆ.
ಬೆಳಿಗ್ಗೆ 11-00ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿಯ ಅಧ್ಯಕ್ಷ ಶಂಕರ ಭಟ್ ಬದನಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉದ್ಯಮಿ ದಿವಾಕರ ದಾಸ್ ನೇರ್ಲಾಜೆ, SLV Groups Pvt. Ltd. Mysore, ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ| ಶಮನ್ ಜೆ. ಶೆಟ್ಟಿ, ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ, ವಿಟ್ಲ, ರಾಜಾರಾಮ ಭಟ್ ಬಲಿಪಗುಳಿ – ಮೆನೇಜಿಂಗ್ ಡೈರೆಕ್ಟರ್, ಇಕೋ ವಿಷನ್, ಬಲಿಪಗುಳಿ, ಚಂದಪ್ಪ ಗೌಡ, ಉದ್ಯಮಿಗಳು ಪೈಸಾರಿ ಆಲಂಗಾರು ಇವರು ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿಯ ಭಜನಾ ಸಂಘಟಕರಾದ ವಿಶ್ವನಾಥ ದೇವಾಡಿಗ ವಿಟ್ಲ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕರಾದ ಶೇಖರ ಪರವ ಅವರಿಗೆ ಸನ್ಮಾನ ನಡೆಯಲಿದೆ.
ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 3 ಗಂಟೆಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ಶೋಭಾಯಾತ್ರೆ ನಡೆಯಲಿದೆ.
ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಶ್ರೀ ರಾಮ್ ಚೆಂಡೆ ಬಳಗ ಪುತ್ತೂರು ಇವರಿಂದ ಸ್ಯಾಕ್ಸೋಫೋನ್ ವಾದನದೊಂದಿಗೆ ಚಿಂಗಾರಿ ಮೇಳ, ಹಾಗೂ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಶ್ರೀ ವಿನಾಯಕನ ಕೃಪೆಗೆ ಪಾತ್ರರಾಗಬೇಕಾಗಿ ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿಯ ಅಧ್ಯಕ್ಷರಾದ ಶಂಕರಭಟ್ ಬದನಾಜೆ, ಕಾರ್ಯಾಧ್ಯಕ್ಷರಾದ ಕೃಷ್ಣಯ್ಯ ಕೆ. ಅರಮನೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








