




ವಿಟ್ಲ: ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ವಿಟ್ಲ ವತಿಯಿಂದ 45ನೇ ವರ್ಷದ ಶ್ರೀ ಗಣೇಶೋತ್ಸವವು ಸೆ. 14 ಸೋಮವಾರದಿಂದ ಸೆ.16 ಬುಧವಾರದವರೆಗೆ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.14 ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ಮೇಗಿನಪೇಟೆಯ ಶ್ರೀ ಮಹಾಮ್ಮಾಯಿ ದೇವಸ್ಥಾನದಿಂದ ಶ್ರೀ ಗಣೇಶನ ಮೂರ್ತಿಯ ವೈಭವದ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪೂರ್ವಾಹ್ನ 9.30ಕ್ಕೆ ಗಣೇಶನ ಪ್ರತಿಷ್ಠೆ, ಶ್ರೀ ಮಹಾಗಣಪತಿ ಹವನ, ಧ್ವಜಾರೋಹಣ ಮತ್ತು ದೀಪ ಪ್ರಜ್ವಲನೆ ನಡೆಯಲಿದೆ. ಎಂಸಿಎಫ್ ನ ನಿವೃತ್ತ ಮುಖ್ಯ ಪ್ರಬಂಧಕರಾದ ಪಿ. ಜಯಶಂಕರ್ ರೈ ಚೆಂಬರಡ್ಕ ದ್ವಜಾರೋಹಣ, ಉದ್ಯಮಿ ಸುಬ್ರಾಯ ಪೈ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ವಿಟ್ಲದ ಅಧ್ಯಕ್ಷರಾದ ಜಗದೀಶ್ ಪಾಣೆಮಜಲು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಲಕ್ಷ್ಮೀ ಬಿ.ಕೆ ಭಟ್ ಪಡಿಬಾಗಿಲು ಹಿರಿಯ ಕಾರ್ಯಕರ್ತೆ ವಿ.ಹಿಂ.ಪ ಮಾತೃಮಂಡಳಿ ವಿಟ್ಲ, ಶೇಖರ ಪರವ ಎರ್ಮನಿಲೆ ದೈವ ನರ್ತಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಬೆಳಿಗ್ಗೆ 10.30ಕ್ಕೆ ವಿಶ್ವನಾಥ ದೇವಾಡಿಗ ಮತ್ತು ಬಳಗ ನೀರಕಣಿ ವಿಟ್ಲ ತಂಡದಿಂದ ಭಜನೆ ನಡೆಯಲಿದೆ, ಗಂಟೆ 11ರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಮಕ್ಕಳಿಂದ ಶ್ರೀ ಗಣಪತಿ ದೇವರ ಚಿತ್ರ ಬಿಡಿಸುವ ಸ್ಪರ್ಧೆ, ಮಧ್ಯಾಹ್ನ 12 ಗಂಟೆಗೆ ಚಿಂತನ್ ಪುರುಷೋತ್ತಮ್ ಪಡಿಬಾಗಿಲು ಇವರಿಂದ ಸ್ಯಾಕ್ಸೋಪೋನ್ ವಾದನ, 12.30ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ 15 ವರ್ಷದ ಒಳಗಿನವರಿಗೆ ಮತ್ತು ಸಾರ್ವಜನಿಕರಿಗೆ ವಂದೇ ಮಾತರಂ ಗುಂಪು ಗಾಯನ ಸ್ಪರ್ಧೆ(3ಅಥವಾ ಅಧಿಕ ಜನ), ಭಕ್ತಿಗೀತೆ, ಹೂ ಕುಟ್ಟುವ, ರಂಗೋಲಿ ಮತ್ತು ಯೋಗಾಸನ ಸ್ಪರ್ಧೆಗಳು ನಡೆಯಲಿದ್ದು, ಸಂಜೆ 4.30ಕ್ಕೆ ಶ್ರೀ ಕಾಶಿ ಮಕ್ಕಳ ಭಜನಾ ಕಾಶಿಮಠ ವಿಟ್ಲ ತಂಡದಿಂದ ಕುಣಿತ ಭಜನೆ, ಸಂಜೆ 6 ಗಂಟೆಗೆ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದ್ದು ಯಕ್ಷಭಾರತ ಸೇವಾ ಪ್ರತಿಷ್ಠಾನ(ರಿ.) ಭಗವತೀ ದೇವಸ್ಥಾನದ ಬಳಿ ವಿಟ್ಲ ಇವರಿಂದ ಮಾಯಾ ತಿಲೋತ್ತಮೆ ಮತ್ತು ರಾಣಿ ಶಶಿ ಪ್ರಭೆ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾತ್ರಿ 9ಗಂಟೆಗೆ ರಂಗಪೂಜೆ ನಡೆಯಲಿದೆ.
ಸೆ.15 ರ ಮಂಗಳವಾರದಂದು ಬೆಳಿಗ್ಗೆ 7 ಗಂಟೆಗೆ ಮಹಾಗಣಪತಿ ಹವನ, 8 ಮತ್ತು 9 ಗಂಟೆಗೆ ಭಜನೆ, 10 ಗಂಟೆಗೆ ಶಕ್ತಿ ಗಣಪತಿ ಹವನ, 11 ಗಂಟೆಗೆ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. 2.30ರಿಂದ ಪ್ರಾಥಮಿಕ ಮತ್ತು ಪ್ರೌಡ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಗಣೇಶೋತ್ಸವದಿಂದ ಧಾರ್ಮಿಕ ಜಾಗೃತಿ ವಿಷಯದ ಬಗ್ಗೆ ಭಾಷಣ ಸ್ಪರ್ಧೆ, ಸಂಜೆ 4.30ಕ್ಕೆ ಸಾರಸ್ವತ ಭಜನಾ ಮಂಡಳಿ ವಿಟ್ಲ ತಂಡದಿಂದ ಭಜನೆ, 6 ಗಂಟೆಗೆ ಮಹಿಳಾ ಮಂಡಲ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 7 ಗಂಟೆಗೆ ಗೀತ್ ಸಂಗೀತ್ ಉಪ್ಪಳ ಸಾದರಪಡಿಸುವ ರಂಜಿತ್ ಬಾಬ ಕೋಡಿಬೈಲು ಮತ್ತು ಬಳಗದವರಿಂದ ಭಕ್ತಿ ಗಾನ ವೈಭವ ರಾತ್ರಿ 9ಗಂಟೆಗೆ ರಂಗಪೂಜೆ ನಡೆಯಲಿದೆ.
ಸೆ.16 ರ ಬುಧವಾರ ಬೆಳಿಗ್ಗೆ 7 ಗಂಟೆಗೆ ಶ್ರೀ ಮಹಾಗಣಪತಿ ಹವನ, 7.30 ಮತ್ತು 9 ಗಂಟೆಗೆ ಭಜನೆ, 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ಜಗದೀಶ್ ಪಾಣೆಮಜಲು ಅಧ್ಯಕ್ಷತೆ ವಹಿಸಲಿದ್ದಾರೆ. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಶಂಕರ ಭಟ್ ಪೂಗವನ ಬದನಾಜೆ, ಗೌರವ ಉಪಸ್ಥಿತಿ ಹಿರಿಯ ಕಾರ್ಯಕರ್ತರಾದ ಜಗನ್ನಾಥ ಶೆಟ್ಟಿ ಕುಂಪಲ, ಎಸ್ ಕೊರಗಪ್ಪಗೌಡ ಸೇರಾಜೆ, ರಾಜೇಶ್ ವಿಟ್ಲ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದ್ದು ಬಳಿಕ ಸಂಜೆ 3 ಗಂಟೆಗೆ ಶೋಭಾಯಾತ್ರೆ ನಡೆಯಲಿದೆ.








