Sunday, September 13, 2026
spot_imgspot_img
spot_imgspot_img

23 ವರ್ಷಗಳ ಸೇನಾ ಸೇವೆ ಬಳಿಕ ಹುಟ್ಟೂರಿಗೆ ಮರಳಿದ ವೀರ ಯೋಧನಿಗೆ ಪೆರುವಾಯಿಯಲ್ಲಿ ಸ್ವಾಗತ

- Advertisement -
- Advertisement -

ಪೆರುವಾಯಿ: ಭಾರತೀಯ ಸೇನೆಯಲ್ಲಿ 23 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಮರಳುತ್ತಿರುವ ಪೆರುವಾಯಿ ಕಲ್ಲಡ್ಕ ನಿವಾಸಿ, ಭಾರತೀಯ ಸೇನೆಯ ವೀರ ಯೋಧ ಶ್ರೀ ಚಂದ್ರಶೇಖರ ಪೂಜಾರಿ ಅವರಿಗೆ ಸೆ.13ರಂದು ಹುಟ್ಟೂರ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.ವಿಶ್ವ ಹಿಂದೂ ಪರಿಷತ್- ಬಜರಂಗದಳದ ಶ್ರೀ ಕೃಷ್ಣ ಶಾಖೆ, ಪೆರುವಾಯಿ ಘಟಕದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೆ.13ರಂದು ಸಂಜೆ 4 ಗಂಟೆಗೆ ವಾಹನ ಜಾಥಾ ನಡೆಯಲಿದ್ದು, ಕುದ್ದುಪದವಿನಿಂದ ಹೊರಟು ಪೆರುವಾಯಿ ಜಂಕ್ಷನ್ ಮಾರ್ಗವಾಗಿ ಕಲ್ಲಡ್ಕದಲ್ಲಿರುವ ಚಂದ್ರಶೇಖರ ಪೂಜಾರಿ ಅವರ ನಿವಾಸದವರೆಗೆ ಜಾಥಾ ಸಾಗಲಿದೆ.ವಾಹನ ಜಾಥಾಕ್ಕೆ ನಿವೃತ್ತ ಶಾಲಾ ಶಿಕ್ಷಕ ಶ್ರೀ ರಾಮಯ್ಯ ಶೆಟ್ಟಿ, ಮುಕ್ತಾಪು ಚಾಲನೆ ನೀಡಲಿದ್ದಾರೆ. ಬಳಿಕ ಚಂದ್ರಶೇಖರ ಪೂಜಾರಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಗುವುದು.

- Advertisement -

Related news

error: Content is protected !!