- Advertisement -
- Advertisement -





ಉಡುಪಿ: ಚಲಿಸುತ್ತಿದ್ದ ಇಲೆಕ್ಟಿಕ್ ಸ್ಕೂಟರ್ ವೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕಗೊಂಡ ಸವಾರ ರಸ್ತೆ ಮಧ್ಯೆಯೇ ಸ್ಕೂಟರ್ ನಿಲ್ಲಿಸಿ ತಕ್ಷಣ ದೂರ ಓಡಿ ಹೋಗಿದ್ದಾನೆ. ಇದರಿಂದ ಸವಾರ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ.
ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಬಳಿಕ ಸ್ಥಳೀಯರು ನೀರು ಸುರಿದು ಬೆಂಕಿಯನ್ನು ನಂದಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
- Advertisement -








