Sunday, September 13, 2026
spot_imgspot_img
spot_imgspot_img

ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸಭೆ: ರೈತ ಮೋರ್ಚಾ ನೂತನ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ತರ್ಯಾಡ್ಕ ಆಯ್ಕೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸಭೆಯು ಇಂದು(ಸೆ.13) ಗಾಣದಪಡ್ಪು ಪಕ್ಷದ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರೈತ ಮೋರ್ಚಾದ ನೂತನ ಅಧ್ಯಕ್ಷರಾಗಿ ಮಾಣಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ವಿಟ್ಲಪಡ್ನೂರು ಗ್ರಾಮದ ಉಮೇಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಉಮೇಶ್ ಶೆಟ್ಟಿ ಅವರು ಮಾಜಿ ಪಂಚಾಯತ್ ಸದಸ್ಯರಾಗಿ, ಬಿಜೆಪಿ ಬೂತ್ ಸಮಿತಿ ಸದಸ್ಯರಾಗಿ ಹಾಗೂ ಮಾಜಿ ಸೊಸೈಟಿ ನಿರ್ದೇಶಕರಾಗಿ ಆಡಳಿತ ಅನುಭವ ಹೊಂದಿದ್ದಾರೆ.

ಪಕ್ಷದ ತತ್ವ-ಸಿದ್ಧಾಂತದೊಂದಿಗೆ ಬಿಜೆಪಿಯನ್ನು ಸಮರ್ಥವಾಗಿ ಮುನ್ನಡೆಸಿ, ಮಾಣಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಆನೆಬಲ ತರಲಿ ಎಂದು ಹಾರೈಸಿ ಅಭಿನಂದನೆ ಸಲ್ಲಿಸಲಾಯಿತು.

ಇವರನ್ನು ಆಯ್ಕೆ ಮಾಡಿದ ಪಕ್ಷದ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಹಾಗೂ ಎಲ್ಲಾ ಪ್ರಮುಖರಿಗೆ ವಂದನೆಗಳನ್ನು ಸಲ್ಲಿಸಲಾಯಿತು.

- Advertisement -

Related news

error: Content is protected !!