- Advertisement -
- Advertisement -

ವಿಟ್ಲ:* ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಿಂಹ ಮಾಸದ ಕೊನೆಯ ವಿಶೇಷ ಪೂಜೆಯು ಸೆಪ್ಟೆಂಬರ್ 17 ಗುರುವಾರ ರಾತ್ರಿ 8 ಗಂಟೆಗೆ ನಡೆಯಲಿದೆ.ಕುಂಟು ಕುಡೇಲು ಶ್ರೀ ರಘುರಾಮ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ಜರುಗಲಿದ್ದು, ಬಳಿಕ ಶ್ರೀ ದೇವರಿಗೆ ರಂಗ ಪೂಜೆ ನಡೆಯಲಿದೆ.ರಂಗಪೂಜೆಯ ಸೇವೆಯನ್ನು ಶ್ರೀಮತಿ ಮತ್ತು ಬಿ. ಸಂದೇಶ್ ಶೆಟ್ಟಿ ಬಿಕ್ನಾಜೆ ಮತ್ತು ಮಕ್ಕಳು ನೆರವೇರಿಸಲಿದ್ದಾರೆ. ಅನ್ನಪ್ರಸಾದ ಸೇವೆಯನ್ನು ಬಿ. ಸಂದೇಶ್ ಶೆಟ್ಟಿ, ಚಂದ್ರಹಾಸ ಗೌಡ, ಬನ ಗೌತಮ್ ರೈ ಮಾರುಗುಳಿ ಅವರು ವಹಿಸಿಕೊಂಡಿದ್ದಾರೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವಂತೆ ಜೀರ್ಣೋದ್ಧಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -








