- Advertisement -
- Advertisement -





ವಿಟ್ಲ: ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿರುವ 45ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ವಿಟ್ಲದ ಉದ್ಯಮಿ ಸುಬ್ರಾಯ ಪೈ ಚಾಲನೆ ನೀಡಿದರು.ಮಂಗಳೂರು ಎಂಸಿಎಫ್ನ ನಿವೃತ್ತ ಮುಖ್ಯ ಪ್ರಬಂಧಕ ಪಿ. ಜಯಶಂಕರ ರೈ ಚೆಂಬರಡ್ಕ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವ ನರ್ತಕ ಶೇಖರ ಪರವ ಎರ್ಮೆನಿಲೆ, ಲಕ್ಷ್ಮಿ ಬಿ.ಕೆ. ಭಟ್ ಹಾಗೂ ನಿವೃತ್ತ ಯೋಧ ಚಂದ್ರಶೇಖರ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಹರೀಶ್ ಕೆ. ವಿಟ್ಲ ಸ್ವಾಗತಿಸಿ ನಿರೂಪಿಸಿದರು.
ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ರಾಮದಾಸ್ ಶೆಣೈ ಪ್ರಸ್ತಾವನೆ ಸಲ್ಲಿಸಿದರು. ಅಧ್ಯಕ್ಷ ಜಗದೀಶ್ ಪಾಣೆಮಜಲು ವಂದಿಸಿದರು. ಕಾರ್ಯದರ್ಶಿ ಜೀವನ್ ಕೂಜಪ್ಪಾಡಿ ಹಾಗೂ ಕೋಶಾಧಿಕಾರಿ ಮನೋಜ್ ಕಾಶಿಮಠ ಸಹಕರಿಸಿದರು.
- Advertisement -








