Tuesday, September 15, 2026
spot_imgspot_img
spot_imgspot_img

ವಿಟ್ಲ: 28ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಭಾ ಕಾರ್ಯಕ್ರಮ ಸಂಪನ್ನ – ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದ ಕಾರ್ತಿಕ್ ಗೆಳೆಯರ ಬಳಗ

- Advertisement -
- Advertisement -

ವಿಟ್ಲ: ಕಾರ್ತಿಕ್ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಭಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಂಕರ ಭಟ್ ಬದನಾಜೆ ಅವರಿಗೆ ಸಂಘಟಕರು ಗೌರವಪೂರ್ವಕ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ದಿವಾಕರ್ ದಾಸ್ ನೆರ್ಲಾಜೆ, ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಮುಖ್ಯ ಅತಿಥಿಗಳಾದ ಡಾ. ಸ್ಮಿತಾ ಮಹೇಶ್ ಬಿ.ಸಿ. ರೋಡ್, ಡಾ. ಶಮನ್ ಜೆ. ಶೆಟ್ಟಿ, ಚಂದಪ್ಪ ಗೌಡ ಹಾಗೂ ಅತಿಥಿಗಳಾದ ಶ್ರೀಮತಿ ಭವಾನಿ ಕೆ. ರೈ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.

ಇದೇ ವೇಳೆ ಸನ್ಮಾನ ಸ್ವೀಕರಿಸಿದ ವಿಶ್ವನಾಥ್ ದೇವಾಡಿಗ ವಿಟ್ಲ ಹಾಗೂ ಶೇಖರ ಪರವ ಕೋಡಂಗೈ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಕಾರ್ತಿಕ್ ಗೆಳೆಯರ ಬಳಗದ ಅಧ್ಯಕ್ಷರಾದ ಕರುಣಾಕರ ಮುದೂರು ಸೇರಿದಂತೆ ಉಪಸ್ಥಿತರಿದ್ದ ಎಲ್ಲಾ ಬಂಧುಗಳಿಗೆ ಸಂಘಟಕರು ಕೃತಜ್ಞತೆ ಸಲ್ಲಿಸಿದರು.

- Advertisement -

Related news

error: Content is protected !!