


ಮಂಗಳೂರು, ಸೆ.16: ಸೆ.18ರಂದು ಮಂಗಳೂರಿನ ಪಡೀಲ್ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೆ.17ರ ಸಂಜೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಮಂಗಳೂರಿಗೆ ಆಗಮಿಸಲಿದ್ದು, ಸೆ.18 ಮತ್ತು 19ರಂದು ಗಣ್ಯರ ಸಂಚಾರದ ಹಿನ್ನೆಲೆಯಲ್ಲಿ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ಭದ್ರತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಮಂಗಳೂರು ನಗರ ಪೊಲೀಸರು ಗಣ್ಯರ ಸಂಚಾರದ ಮಾರ್ಗಗಳು ಹಾಗೂ ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ. ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಗಣ್ಯರ ಸಂಚಾರದ ಮಾರ್ಗಗಳು
ಸೆ.17ರ ಸಂಜೆ ಹಾಗೂ ಸೆ.19ರ ಬೆಳಗ್ಗೆ:
ಬಜಪೆ ವಿಮಾನ ನಿಲ್ದಾಣ ಕಾವೂರು ಬೊಂದೇಲ್ – ಮೇರಿಹಿಲ್ – ಕೆಪಿಟಿ – ಕದ್ರಿ ಕಂಬಳ – ಬಂಟ್ಸ್ ಹಾಸ್ಟೆಲ್ – ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್ – ಹಂಪನಕಟ್ಟೆ – ಕ್ಲಾಕ್ ಟವರ್ – ಹ್ಯಾಮಿಲ್ಟನ್ ಜಂಕ್ಷನ್.

ಸೆ.18ರ ಬೆಳಗ್ಗೆ:
ಹ್ಯಾಮಿಲ್ಟನ್ ಜಂಕ್ಷನ್ – ಕ್ಲಾಕ್ ಟವರ್ – ಹಂಪನಕಟ್ಟೆ – ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್ – ಕೆಪಿಟಿ ಜಂಕ್ಷನ್ – ನಂತೂರು ವೃತ್ತ – ಪಂಪ್ವೆಲ್ – ನಾಗುರಿ – ಬಜಾಲ್ ಕ್ರಾಸ್ (ಪ್ರಜಾಸೌಧ) – ಪಡೀಲ್ ಜಂಕ್ಷನ್.
ಈ ಮಾರ್ಗಗಳಲ್ಲಿ ರಸ್ತೆ ಬದಿ ವಾಹನ ನಿಲುಗಡೆ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ. ಆಂಬ್ಯುಲೆನ್ಸ್ ಹಾಗೂ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳು
ಬದ್ರಿಯಾ ಜಂಕ್ಷನ್–ಹ್ಯಾಮಿಲ್ಟನ್ ಜಂಕ್ಷನ್:
ತಾಜ್ ವಿವಾಂತ ಹೋಟೆಲ್ ಮುಂಭಾಗದಿಂದ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ಬದ್ರಿಯಾ ಜಂಕ್ಷನ್–ನೀಲೇಶ್ವರ ರಸ್ತೆ–ರೊಸಾರಿಯೋ ರಸ್ತೆ ಮೂಲಕ ಸಂಚರಿಸಬೇಕು.
ಹ್ಯಾಮಿಲ್ಟನ್ ಜಂಕ್ಷನ್–ಬದ್ರಿಯಾ ಜಂಕ್ಷನ್:
ಹ್ಯಾಮಿಲ್ಟನ್ ಜಂಕ್ಷನ್ನಿಂದ ಬದ್ರಿಯಾ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ನೆಲ್ಲಿಕಾಯಿ ರಸ್ತೆ ಮೂಲಕ ತೆರಳಬೇಕು.
ಪಂಪ್ವೆಲ್ ಪಡೀಲ್:
ನಾಗುರಿ ಮೂಲಕ ಪಂಪ್ವೆಲ್ನಿಂದ ಪಡೀಲ್ ಕಡೆಗೆ ಸಂಚರಿಸುವ ವಾಹನಗಳು ನಂತೂರು ವೃತ್ತ–ಕೈಕಂಬ–ಮರೋಳಿ ಮಾರ್ಗ ಬಳಸಬೇಕು. ಪರ್ಯಾಯವಾಗಿ ತೊಕ್ಕೊಟ್ಟು–ದೇರಳಕಟ್ಟೆ–ಮುಡಿಪು–ಬೋಳಿಯಾರ್–ಮೆಲ್ಕಾರ್ ಮಾರ್ಗ ಬಳಸಬಹುದು.
ಬಜಾಲ್ ಕ್ರಾಸ್ (ಪ್ರಜಾಸೌಧ)–ಬಜಾಲ್/ಕಂಕನಾಡಿ ರೈಲು ನಿಲ್ದಾಣ:
ಪಡೀಲ್–ಬಜಾಲ್ ಮಾರ್ಗದ ಬದಲಿಗೆ ರಾಷ್ಟ್ರೀಯ ಹೆದ್ದಾರಿ-66 ಮೂಲಕ ಜಪ್ಪಿನಮೊಗರು ದ್ವಾರ–ಬಜಾಲ್ ಮಾರ್ಗ ಬಳಸಬೇಕು.
ತೊಕ್ಕೊಟ್ಟು–ಪಂಪ್ವೆಲ್:
ತೊಕ್ಕೊಟ್ಟಿನಿಂದ ಪಂಪ್ವೆಲ್ ಕಡೆಗೆ ಬರುವ ವಾಹನಗಳು ಮಹಾಕಾಳಿಪಡ್ಪು–ಮಂಗಳಾದೇವಿ ಮಾರ್ಗವಾಗಿ ನಗರ ಪ್ರವೇಶಿಸಬೇಕು.
ಸಾರ್ವಜನಿಕರು ಸಂಚಾರ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.








