Thursday, September 17, 2026
spot_imgspot_img
spot_imgspot_img

ಅಡಿಕೆ ಬೇಯಿಸುವಾಗ ಹಂಡೆಯೊಳಗೆ ಬಿದ್ದು ವ್ಯಕ್ತಿ ಸಾವು..!

- Advertisement -
- Advertisement -

ಶಿವಮೊಗ್ಗ: ಅಡಿಕೆ ಬೇಯಿಸುವಾಗ ಹಂಡೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವಡ್ಡಿನಕೊಪ್ಪದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ನಗರದ ಜೇನು ಕುಮಾರ್ ಮೃತರು. ಸೆ.8 ರಂದು ಜೇನು ಕುಮಾರ್ ತಮ್ಮ ಮನೆ ಬಳಿ ಶೆಡ್‌ನಲ್ಲಿ ಅಡಿಕೆ ಬೇಯಿಸುತ್ತಿದ್ದರು. ಬಳಿಕ ಅಡಿಕೆ ಹೊರತೆಗೆದು, ಹಂಡೆಯಲ್ಲಿದ್ದ ಅಡಿಕೆ ಚೊಗರು ತೆಗೆಯಲು ಪಕ್ಕದಲ್ಲಿದ್ದ ಕಟ್ಟೆ ಏರಿದ್ದ ವೇಳೆ ಕಾಲು ಜಾರಿ ಹಂಡೆಯೊಳಗೆ ಬಿದ್ದಿದ್ದರು.

ಕೂಡಲೇ ಪಕ್ಕದಲ್ಲಿಯೇ ಇದ್ದ ಇತರ ಮೂವರು ಅವರನ್ನು ಮೇಲಕ್ಕೆತ್ತಿದ್ದರು. ಬಳಿಕ ಜೇನು ಕುಮಾರ್‌ ಶೆಡ್‌ನಿಂದ ಹೊರಗೆ ಓಡಿ, ಶರ್ಟ್‌ ತೆಗೆದು ಪುನಃ ಶೆಡ್‌ ಒಳಗೆ ಬಂದಿದ್ದರು. ಅಷ್ಟರಲ್ಲೇ ಅವರ ದೇಹದ ಬಹುತೇಕ ಭಾಗ ಸುಟ್ಟು ಹೋಗಿದ್ದವು.

ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ ವೈದ್ಯರ ಸಲಹೆಯಂತೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!