- Advertisement -
- Advertisement -



ವಿಟ್ಲ: ವಿಠಲ ಜಿ.ಎಸ್.ಬಿ. ಸೌಹಾರ್ದ ಸಹಕಾರಿ ಸಂಘ ನಿ. ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಇಂದು [ಸೆ.23 ಬುಧವಾರ] ಬೆಳಿಗ್ಗೆ 10 ಗಂಟೆಗೆ ವಿಟ್ಲದ ಅರಮನೆ ರಸ್ತೆಯ ಶ್ರೀನಿವಾಸ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಪೈ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಳಿಗ ಅವರು 2025-26ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.
’2025-26 ನೇ ಸಾಲಿನಲ್ಲಿ ಸಂಘವು 6,51,699/- ಲಾಭವನ್ನು ಗಳಿಸಿದೆ. ಡಿವಿಡೆಂಟ್ ಶೇ.9ರಷ್ಟು ಘೋಷಿಸಿದರು.
ಸಭಾ ಕಾರ್ಯಕ್ರಮವನ್ನು ಕೊಪ್ಪ ಕೃಷ್ಣಪ್ರಸಾದ್ ನಿರೂಪಿಸಿದರು. ರಾಮದಾಸ್ ಶೆಣೈ ಸ್ವಾಗತಿಸಿದರು. ಸುಭಾಷ್ ಚಂದ್ರ ನಾಯಕ್ ಅವರು ಧನ್ಯವಾದ ಸಮರ್ಪಿಸಿದರು.
- Advertisement -








