Tuesday, October 6, 2026
spot_imgspot_img
spot_imgspot_img

ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳು ಸಾವು

- Advertisement -
- Advertisement -

ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದಲ್ಲಿ ನಡೆದಿದೆ.

ಮೃತ ಮಕ್ಕಳೆಲ್ಲ ಒಂದೇ ಊರಿನವರಾಗಿದ್ದು, ಎಲ್ಲಾ12 ವರ್ಷದವರಾಗಿದ್ದಾರೆ. ಇವರೆಲ್ಲ ಬೇರೆ ಬೇರೆ ಶಾಲೆಗಳಲ್ಲಿ 6ನೇ ತರಗತಿ ಓದುತ್ತಿದ್ದರು. ಶಾಲೆಗಳಿಗೆ ದಸರಾ ರಜೆ ಇರುವುದರಿಂದ ಮಕ್ಕಳು ಕೆರೆಯಲ್ಲಿ ಈಜಲು ತೆರಳಿದ್ದರು.

ಹಳ್ಳಿಗಳಲ್ಲಿ ಕೆರೆ ಬಳಿ ಮಹಿಳೆಯರು ಬಟ್ಟೆ ಹಾಗೂ ಪಾತ್ರೆ ತೊಳೆಯಲು ನಿರ್ಮಿಸಿರುವ ಕಟ್ಟೆಗಳ ಬಳಿ ಮಕ್ಕಳು ಈಜುವಾಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಕೆರೆ ಬಳಿ ಇಡೀ ಗ್ರಾಮದ ಜನರು ಜಮಾಯಿಸಿದ್ದಾರೆ. ಸ್ಥಳದಲಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಾಲಾಗಿ ಮಲಗಿಸಿರುವ ಪುಟ್ಟ-ಪುಟ್ಟ ಮಕ್ಕಳು ಮೃತದೇಹವನ್ನ ಕಂಡು ಇಡೀ ಗ್ರಾಮದ ಜನರೇ ಕಣ್ಣೀರಿಟ್ಟಿದ್ದಾರೆ. ಕಳೆದ ವರ್ಷ ಕೆರೆಯಲ್ಲಿ ಹೂಳು ತೆಗೆದಿದ್ದರಿಂದ ಕೆರೆಯ ಆಳದ ಪ್ರಮಾಣವೂ ಹೆಚ್ಚಿತ್ತು. ಆಳದ ಅರಿವಿಲ್ಲದ ಮಕ್ಕಳು ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!