- Advertisement -
- Advertisement -


ಶಿವಮೊಗ್ಗ: ರಾಜ್ಯದಲ್ಲಿ ತೀವ್ರ ಬರಗಾಲಕ್ಕೆ ರೈತರು, ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ಶಿಕಾರಿಪುರ ತಾಲೂಕಿನ ಹರಿಗೆ ಗ್ರಾಮಸ್ಥರು ಬೀಗರೂಟಕ್ಕೆ ನಿಷೇಧ ಹೇರಿದ್ದಾರೆ.
ಗ್ರಾಮಸ್ಥರು ಸಂಪ್ರದಾಯ ಬದಿಗಿರಿಸಿ, ಆರ್ಥಿಕ ಶಿಸ್ತಿಗೆ ಮಹತ್ವ ನೀಡಿದ್ದಾರೆ. ಬಿಗರೂಟ ಹಾಕಿದರೆ 1 ಲಕ್ಷ ರೂ. ದಂಡ ಹಾಗೂ ಊಟ ಮಾಡಿದ್ರೆ 50 ಸಾವಿರ ರೂ. ದಂಡ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಇದರಿಂದ ಬಡವರು ಹಾಗೂ ಮಧ್ಯಮ ವರ್ಗದವರ ಆರ್ಥಿಕ ಹೊರೆ ಭಾರೀ ಇಳಿಕೆಯಾಗಲಿದೆ.
ಇತ್ತೀಚೆಗೆ ಮಲೆನಾಡು ಭಾಗದಲ್ಲಿ ಬಡ – ಮಧ್ಯಮ ಕುಟುಂಬಗಳು ಪ್ರತಿಷ್ಠೆಗಾಗಿ ಸಾಲ ಮಾಡಿ, ಬೀಗರೂಟ ಆಯೋಜಿಸುತ್ತಿದ್ದರು. ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕುತ್ತಿದ್ದ ಹಿನ್ನೆಲೆ ಈ ನಿರ್ಣಯ ಕೈಗೊಳ್ಳಲಾಗಿದೆ. ಬೇರೆ ಗ್ರಾಮಕ್ಕೆ ಹೋಗಿ ಬೀಗರೂಟ ಮಾಡಿದರೆ 50 ಸಾವಿರ ರೂ. ದಂಡ ವಿಧಿಸಲು ಸಹ ಗ್ರಾಮಸ್ಥರು ಮುಂದಾಗಿದ್ದಾರೆ.
ಗ್ರಾಮದ ದೇವಾಲಯದಲ್ಲಿ ಸಭೆ ನಡೆಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಚರ್ಚೆ ಆರಂಭವಾಗಿದೆ.
- Advertisement -








