Saturday, October 10, 2026
spot_imgspot_img
spot_imgspot_img

ಬಂಟ್ವಾಳ: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾದಿಂದ ಅ.11 ರಂದು ಸೇವಾ ಸಂಕಲ್ಪ ಅಭಿಯಾನ

- Advertisement -
- Advertisement -

ಬಂಟ್ವಾಳ : ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ನಡೆಯುತ್ತಿರುವ ಸೇವಾ ಸಂಕಲ್ಪ ಅಭಿಯಾನದ ಅ೦ಗವಾಗಿ ಬಂಟ್ವಾಳ ಬಿಜೆಪಿ ಯುವ ಮೋರ್ಚಾ ವತಿಯಿಂದ ಅ.11ರಂದು ಆದಿತ್ಯವಾರ ವಿವಿಧ ಕಾರ್ಯಕ್ರಮಗಳು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ.

ಪ್ರಧಾನ ಮಂತ್ರಿಗಳು ಕರೆ ನೀಡಿದ “ಫಿಟ್ ಇಂಡಿಯಾ” ಶೀರ್ಷಿಕೆಯಡಿ ಮ್ಯಾರಥಾನ್ ಓಟದ ಸ್ಪರ್ಧೆ ಬೆಳಿಗ್ಗೆ 7.30 ಕ್ಕೆ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ಪಡೆಯಲಿದ್ದಾರೆ. ಇದೇ ಸಂದರ್ಭದಲ್ಲಿ ನಶಾ ಮುಕ್ತ ಅಭಿಯಾನದ ಪ್ರತಿಜ್ಞೆ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 09.30ಕ್ಕೆ ಸುರತ್ಕಲ್ ಮುಕ್ಕ ಶ್ರೀನಿವಾಸ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್ ಸಹಯೋಗದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಅಂಚೆ ಕಚೇರಿ ಪುತ್ತೂರು ವಿಭಾಗದ ಸಹಕಾರದಲ್ಲಿ ಅಂಚೆ ವಿಮಾ ನೋಂದಣಿ ಶಿಬಿರ ನಡೆಯಲಿದೆ. ಶಾಸಕರು, ಸಂಸದರು ಪಕ್ಷದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯುವ ಸಾಧಕರುಗಳಿಗೆ ಸನ್ಮಾನ, ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಪುರಸಭೆಯ ಪೌರ ಕಾರ್ಮಿಕರಿಗೆ ಗೌರವ ಕಾರ್ಯಕ್ರಮಗಳು ನಡೆಯಲಿವೆ.

- Advertisement -

Related news

error: Content is protected !!