Monday, October 26, 2026
spot_imgspot_img
spot_imgspot_img

ದೂಪದಕಟ್ಟೆಯಲ್ಲಿ ಬೈರಂಪಳ್ಳಿ ಗ್ರಾಮೀಣ ಮಟ್ಟದ ವಾಲಿಬಾಲ್‌ ಪಂದ್ಯಾಟ

- Advertisement -
- Advertisement -

ಸಾಂತ್ಯಾರು ದೇವಿದಯ ಫ್ರೆಂಡ್ಸ್ (ಎ) ತಂಡ ಪ್ರಥಮ, ಯುನೈಟೆಡ್ ಫ್ರೆಂಡ್ಸ್ ಶಿರೂರು(ಎ) ದ್ವಿತೀಯ

ದೂಪದಕಟ್ಟೆ: ಯುವ ಗೆಳೆಯರ ಬಳಗ ದೂಪದಕಟ್ಟೆ ಇವರ ಆಶ್ರಯದಲ್ಲಿ ಬೈರಂಪಳ್ಳಿ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾಕೂಟ 2026 ಅನ್ನು ಅಕ್ಟೋಬರ್ 25, 2026ರ ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ದೂಪದಕಟ್ಟೆಯಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಂತೋಷ್ ಪ್ರಭಾತ್, ಅತಿಥಿಗಳಾಗಿ ದಿನೇಶ್ ಶೆಟ್ಟಿ(ಕೇಬಲ್ ನೆಟ್ವರ್ಕ್), ಸುಧೀಂದ್ರ ಸಾಂತ್ಯಾರು, ಸಂದೀಪ್ ಬಂಡಾಬೆಟ್ಟು ಹಾಗೂ ಸಂತೋಷ್ ಸೇರೆಗಾರ್(ಪಂಚಲಿಂಗೇಶ್ವರ, ಸಾಂತ್ಯಾರು), ಪಂದ್ಯಾಕೂಟಕ್ಕೆ ಸ್ಥಳಾವಕಾಶವನ್ನು ಮಾಡಿಕೊಟ್ಟ ಲಲಿತಾ ಶೆಟ್ಟಿ ಹಾಗೂ ಬಳಗದ ಅಧ್ಯಕ್ಷರಾದ ಸುರೇಶ್ ಕುಲಾಲ್ ಉಪಸ್ಥಿತರಿದ್ದರು.

ಅತಿಥಿಗಳನ್ನು ಶಾಲು ಮತ್ತು ಹೂವು ನೀಡಿ ಗೌರವಪೂರ್ವಕವಾಗಿ ಉದಯ್ ಸ್ವಾಗತಿಸಿದರು. ಬಳಿಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪಂದ್ಯಾಕೂಟದ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ₹6,666, ದ್ವಿತೀಯ ಬಹುಮಾನ ₹4,444 ಹಾಗೂ ತೃತೀಯ ಬಹುಮಾನ ₹2,222 ನಗದು ಬಹುಮಾನಗಳನ್ನು ನಿಗದಿಪಡಿಸಲಾಗಿತ್ತು. ತಂಡಗಳಿಗೆ ಪ್ರವೇಶ ಶುಲ್ಕ ₹800 ಆಗಿದ್ದು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿತ್ತು. ಗ್ರಾಮೀಣ ಭಾಗದ ಬಂಡಸಾಲೆ, ಅಣ್ಣಾಲು, ಕುಂತಳಕಟ್ಟೆ, ದೂಪದಕಟ್ಟೆ, ಸಾಂತ್ಯಾರು, ಶಿರೂರು ಮತ್ತು ಬೆಳ್ಳರ್ಪಾಡಿ ಪ್ರದೇಶಗಳ ಒಟ್ಟು 12 ತಂಡಗಳು ಪಂದ್ಯಾಕೂಟದಲ್ಲಿ ಪಾಲ್ಗೊಂಡು ಉತ್ಸಾಹದ ಪೈಪೋಟಿ ನಡೆಸಿದವು.

ಭಾಗವಹಿಸಿದ 12 ತಂಡಗಳು: ಸಂಗಮ ಫ್ರೆಂಡ್ಸ್ (ಬಂಡಸಾಲೆ); ಲಕ್ಷ್ಮೀಜನಾರ್ದನ ಫ್ರೆಂಡ್ಸ್ ಎ ಮತ್ತು ಬಿ (ಅಣ್ಣಾಲು); ಮಹಾಮಾಯಿ ಅಟ್ಯಾಕರ್ಸ್ (ಕುಂತಳಕಟ್ಟೆ); ವಾಸುಕಿ ಫ್ರೆಂಡ್ಸ್ ಎ ಮತ್ತು ಬಿ (ದೂಪದಕಟ್ಟೆ); ದೇವಿದಯ ಫ್ರೆಂಡ್ಸ್ ಎ ಮತ್ತು ಬಿ (ಸಾಂತ್ಯಾರು); ಸವಾರಿ ಫ್ರೆಂಡ್ಸ್ (ದೂಪದಕಟ್ಟೆ); ಯುನೈಟೆಡ್ ಫ್ರೆಂಡ್ಸ್ ಎ ಮತ್ತು ಬಿ (ಶಿರೂರು); ಮಾತೃ ಫ್ರೆಂಡ್ಸ್ (ಬೆಳ್ಳರ್ಪಾಡಿ).

ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ – ದೇವಿದಯ ಫ್ರೆಂಡ್ಸ್ ಸಾಂತ್ಯಾರು (ಎ), ದ್ವಿತೀಯ – ಯುನೈಟೆಡ್ ಫ್ರೆಂಡ್ಸ್ ಶಿರೂರು (ಎ), ತೃತೀಯ -ವಾಸುಕಿ ಫ್ರೆಂಡ್ಸ್ ದೂಪದಕಟ್ಟೆ (ಎ).

ವೈಯಕ್ತಿಕ ಪ್ರಶಸ್ತಿಗಳು: ಉತ್ತಮ ಅಟ್ಯಾಕರ್ – ಪ್ರಶಾಂತ್ (ಸಾಂತ್ಯಾರು), ಉತ್ತಮ ಸೆಟ್ಟರ್ – ಸುಕುಮಾರ್ (ಸಾಂತ್ಯಾರು), ಉತ್ತಮ ಆಲ್‌ರೌಂಡರ್ – ಮುನ್ನಾ (ಶಿರೂರು).

ಕಾರ್ಯಕ್ರಮದ ಯಶಸ್ಸಿಗೆ ಬೆಳಕಿನ ವ್ಯವಸ್ಥೆಯನ್ನು ಭೈದಶ್ರೀ ಡಿ.ಜೆ. ಸೌಂಡ್ಸ್ ಶಾಮಿಯಾನದ ವ್ಯವಸ್ಥೆಯನ್ನು ವಾಸುಕಿ ಶಾಮಿಯಾನ ಹಾಗೂ ಊಟದ ವ್ಯವಸ್ಥೆಯನ್ನು ಸದಾನಂದ ಕುಲಾಲ್ ಮತ್ತು ಮಕ್ಕಳು ಮಾಡಿಕೊಟ್ಟರು. ಟ್ರೋಫಿ ಹಾಗೂ ಜೆರ್ಸಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಕಾರ್ಕಳದ ಸ್ಪೋರ್ಟ್ಸ್ ಗ್ಯಾಲರಿ (ಮಾಲೀಕರು ಅಜಿತ್ ಸಾಲಿಯಾನ್, ಸಂಪರ್ಕ: +91 98805 46990) ಒದಗಿಸಿದರು. ಸಹಕರಿಸಿದ ಎಲ್ಲರಿಗೂ ಬಳಗದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!