Tuesday, November 10, 2026
spot_imgspot_img
spot_imgspot_img

ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಸಹೋದರರು

- Advertisement -
- Advertisement -

ವಯನಾಡು: ಧರ್ಮದ ಗಡಿಗಳನ್ನು ಮೀರಿ ಮಾನವೀಯತೆ ಮತ್ತು ಬಾಂಧವ್ಯದ ಮಹತ್ವವನ್ನು ಸಾರುವ ಹೃದಯಸ್ಪರ್ಶಿ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ವಯನಾಡು ಜಿಲ್ಲೆಯ ಇಬ್ಬರು ಮುಸ್ಲಿಂ ಸಹೋದರರು, ಸುಮಾರು 50 ವರ್ಷಗಳಿಂದ ತಮ್ಮ ತಾಯಿಯಂತೆಯೇ ಪ್ರೀತಿಸಿ, ಆರೈಕೆ ಮಾಡುತ್ತಿದ್ದ 85 ವರ್ಷದ ಹಿಂದೂ ಮಹಿಳೆಯ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದಾರೆ.

ಮೂನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತ್ರಗಿರಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಲ್ಯಾಣಿ ಅಮ್ಮ ಅವರು ಮಂಗಳವಾರ ನಿಧನರಾದರು. ಅವರಿಗೆ ಮಕ್ಕಳು ಅಥವಾ ಇತರ ಸಂಬಂಧಿಕರು ಇರಲಿಲ್ಲ. ಹೀಗಾಗಿ, ಅವರ ನಿಧನದ ಬಳಿಕ ರಝಾಕ್ ಮತ್ತು ಸುಲೈಮಾನ್ ಎಂಬ ಸಹೋದರರು ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ನೆರವೇರಿಸಿದರು. ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ಸುಮಾರು 50 ವರ್ಷಗಳಿಂದ ಕಲ್ಯಾಣಿ ಅಮ್ಮ ಅವರು ಈ ಸಹೋದರರ ನೆರೆಮನೆಯವರಾಗಿದ್ದರು. ಇಬ್ಬರು ಸಹೋದರರು ಹಾಗೂ ಅವರ ಕುಟುಂಬದವರ ಮತ್ತು ಕಲ್ಯಾಣಿ ಅಮ್ಮ ಅವರ ನಡುವೆ ಅತ್ಯಂತ ಆತ್ಮೀಯವಾದ ಬಾಂಧವ್ಯ ಬೆಳೆದಿತ್ತು. ಸಹೋದರರು ಮತ್ತು ಅವರ ಕುಟುಂಬದ ಸದಸ್ಯರು ಕಲ್ಯಾಣಿ ಅಮ್ಮ ಅವರ ದೈನಂದಿನ ಅಗತ್ಯಗಳನ್ನು ಪೂರೈಸುವುದರ ಜೊತೆಗೆ, ಔಷಧೋಪಚಾರದ ವ್ಯವಸ್ಥೆ ಮಾಡುತ್ತಿದ್ದರು. ಅಗತ್ಯ ಬಿದ್ದಾಗ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಆರೈಕೆ ಮಾಡುತ್ತಿದ್ದರು.

ಕುಟುಂಬದ ಸಂಭ್ರಮಾಚರಣೆಗಳಲ್ಲಿಯೂ ಕಲ್ಯಾಣಿ ಅಮ್ಮ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ವರ್ಷಗಳು ಕಳೆದಂತೆ ಅವರ ನಡುವಿನ ಪ್ರೀತಿ ಮತ್ತು ಆತ್ಮೀಯತೆ ಗಾಢವಾಗಿತ್ತು. ತಮ್ಮನ್ನು ಸ್ವಂತ ತಾಯಿಯಂತೆ ಭಾವಿಸುವ ಕಲ್ಯಾಣಿ ಅಮ್ಮ ಅವರು, ತಮ್ಮ ನಿಧನದ ಬಳಿಕ ರಝಾಕ್ ಮತ್ತು ಸುಲೈಮಾನ್ ಅವರೇ ಅಂತ್ಯಸಂಸ್ಕಾರ ನೆರವೇರಿಸಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅವರ ಕೊನೆಯ ಆಸೆಯನ್ನು ಗೌರವಿಸಿದ ಸಹೋದರರು, ಸ್ಥಳೀಯ ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಚಿತೆಗೆ ಅಗ್ನಿಸ್ಪರ್ಶ ಮಾಡಿ, ಅಂತ್ಯಸಂಸ್ಕಾರದ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಿದರು.

- Advertisement -

Related news

error: Content is protected !!