Thursday, November 19, 2026
spot_imgspot_img
spot_imgspot_img

2027ರಿಂದ ಭಾರತೀಯರಿಗೆ ಮಲೇಷ್ಯಾಕ್ಕೆ ವೀಸಾ-ಮುಕ್ತ ಪ್ರವೇಶ ಸೌಲಭ್ಯ ಸ್ಥಗಿತ

- Advertisement -
- Advertisement -

ಹೊಸದಿಲ್ಲಿ: ಮಲೇಷ್ಯಾ ಜನವರಿ 1,2027ರಿಂದ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ತನ್ನ ವೀಸಾ-ಮುಕ್ತ ಪ್ರವೇಶ ಸೌಲಭ್ಯವನ್ನು ಸ್ಥಗಿತಗೊಳಿಸಲಿದೆ. ಇದರೊಂದಿಗೆ ಮಲೇಷ್ಯಾ ಪ್ರವೇಶಿಸುವ ಮುನ್ನ ಭಾರತೀಯ ಪ್ರಯಾಣಿಕರು ಮಾನ್ಯ ವೀಸಾ ಪಡೆಯುವುದು ಕಡ್ಡಾಯವಾಗಲಿದೆ ಎಂದು India Today ವರದಿ ಮಾಡಿದೆ.

2026ರ ಅಂತ್ಯದಲ್ಲಿ ಭಾರತೀಯ ಪ್ರಜೆಗಳಿಗೆ ಇರುವ ವೀಸಾ ವಿನಾಯಿತಿ ಅವಧಿ ಮುಕ್ತಾಯಗೊಳ್ಳುವುದಾಗಿ ನ.17ರಂದು ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ಮಲೇಷ್ಯಾ ವಲಸೆ ಇಲಾಖೆಯು ದೃಢಪಡಿಸಿದೆ.

ಪರಿಷ್ಕೃತ ಪ್ರವೇಶ ನಿಯಮಗಳ ಅಡಿಯಲ್ಲಿ ಜನವರಿ 1,2027ರಂದು ಅಥವಾ ನಂತರ ಮಲೇಷ್ಯಾಕ್ಕೆ ಭೇಟಿ ನೀಡಲು ಯೋಜಿಸುವ ಎಲ್ಲಾ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಆಗಮನಕ್ಕೂ ಮೊದಲೇ ಕಡ್ಡಾಯವಾಗಿ ವೀಸಾ ಪಡೆಯಬೇಕು. ಹೊಸ ನಿಯಮಗಳು ಜಾರಿಗೆ ಬರುವ ಒಂದು ತಿಂಗಳು ಮುಂಚಿತವಾಗಿ, ಅಂದರೆ ಡಿಸೆಂಬರ್ 1, 2026ರಿಂದ ‘ MyVISA’ ಆನ್‌ಲೈನ್ ಪೋರ್ಟಲ್ ಮೂಲಕ ವೀಸಾ ಅರ್ಜಿಗಳನ್ನು ಸಲ್ಲಿಸಲು ಮಲೇಷ್ಯಾ ಅಧಿಕಾರಿಗಳು ಅವಕಾಶ ಕಲ್ಪಿಸಲಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ನಂತರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಮಲೇಷ್ಯಾ ಡಿಸೆಂಬರ್ 2023ರಲ್ಲಿ ಭಾರತೀಯ ಪ್ರಜೆಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಜಾರಿಗೆ ತಂದಿತ್ತು. ಈ ಕ್ರಮವು ಮಲೇಷ್ಯಾಕ್ಕೆ ಬರುವ ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಲು ಕಾರಣವಾಗಿತ್ತು.

ಆದಾಗ್ಯೂಸೆಪ್ಟೆಂಬರ್ 2026ರಲ್ಲಿ ಕೌಲಾಲಂಪುರದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಸೌಲಭ್ಯದ ದುರ್ಬಳಕೆ ಕುರಿತು ಕಳವಳ ವ್ಯಕ್ತಪಡಿಸಿತ್ತು. ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರಜೆಗಳು ಉದ್ಯೋಗ ಹುಡುಕುವ ಉದ್ದೇಶದಿಂದ ಪ್ರವಾಸಿ ವೀಸಾಗಳಲ್ಲಿ ಮಲೇಷ್ಯಾ ಪ್ರವೇಶಿಸುತ್ತಿದ್ದಾರೆ. ಅಲ್ಲದೆ, ನಕಲಿ ಉದ್ಯೋಗಗಳ ಆಮಿಷವೊಡ್ಡುವ ಏಜೆಂಟರಿಂದ ಕೆಲವು ಪ್ರಯಾಣಿಕರು ದಾರಿ ತಪ್ಪುತ್ತಿದ್ದು ಇದರಿಂದ ಅವರು ವೀಸಾ ಅವಧಿಗಿಂತ ಹೆಚ್ಚು ಕಾಲ ತಂಗುವುದು, ಶೋಷಣೆ, ಬಂಧನ ಮತ್ತು ಕಾನೂನು ಕ್ರಮದ ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದೂ ಎಚ್ಚರಿಸಿತ್ತು.

ಇತರ ವೀಸಾ ಬದಲಾವಣೆಗಳು:

ಏಳು ಕೆಲಸದ ದಿನಗಳಿಗಿಂತ ಹೆಚ್ಚು ಕಾಲ ‘ಹೊಸ ಅರ್ಜಿ’ ಅಥವಾ ‘ಪಾವತಿ ಬಾಕಿ’ ಹಂತದಲ್ಲಿರುವ ಅರ್ಜಿಗಳು ತಾನಾಗಿಯೇ ರದ್ದಾಗುವ ನಿಯಮ ಅಕ್ಟೋಬರ್ 1,2026ರಿಂದ ಜಾರಿಯಾಗಿದೆ. ಸೆಪ್ಟೆಂಬರ್ 1ಕ್ಕೂ ಮುನ್ನ ಸಲ್ಲಸಿದ್ದ ಅರ್ಜಿಗಳಿಗೂ ಇದು ಅನ್ವಯವಾಗುತ್ತದೆ. ಈ ಬದಲಾವಣೆಯನ್ನು ಇಲಾಖೆಯು ಸೆಪ್ಟೆಂಬರ್ 28ರಂದು ಪ್ರಕಟಿಸಿತ್ತು.

ಅರ್ಜಿಗಳು ರದ್ದಾದವರು ಪರಿಷ್ಕೃತ ನಮೂನೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಅಂಗೀಕಾರವಾದರೂ ಅಥವಾ ತಿರಸ್ಕೃತವಾದರೂ, ನೀತಿ ಬದಲಾದರೂ ಅಥವಾ ಪ್ರಯಾಣ ಯೋಜನೆ ಬದಲಾದರೂ ವೀಸಾ ಸಂಸ್ಕರಣಾ ಶುಲ್ಕ ಮರುಪಾವತಿಯಾಗುವುದಿಲ್ಲ. ಸೆಪ್ಟೆಂಬರ್ 1, 2026ರಂದು ಬಹುಪ್ರವೇಶ ವೀಸಾ (ಎಂಇವಿ) ನಿಯಮ ಪರಿಷ್ಕರಿಸಿ 31 ದೇಶಗಳ ಪ್ರಜೆಗಳಿಗೆ ಮಾತ್ರ ಅರ್ಹತೆ ಸೀಮಿತಗೊಳಿಸಿದ ಬಳಿಕ ಈ ಬದಲಾವಣೆಗಳು ಬಂದಿವೆ.

- Advertisement -

Related news

error: Content is protected !!