


ಅಳಿಕೆ: ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್, ಅಳಿಕೆ ಇದರ ಸಂಸ್ಥಾಪಕರಾದ ಪೂಜ್ಯ ಮಡಿಯಾಲ ಶ್ರೀ ನಾರಾಯಣ ಭಟ್(ಅಣ್ಣ) ರವರ ಜನ್ಮ ಶತಮಾನೋತ್ಸವವು ಅಳಿಕೆಯಲ್ಲಿ ನ. 30, ಸೋಮವಾರದಂದು ನಡೆಯಲಿದೆ.
ಬೆಳಿಗ್ಗೆ 5-30ರಿಂದ ನಗರ ಸಂಕೀರ್ತನೆ, ಗಣಪತಿ ಹವನ, ಅಷ್ಟೋತ್ತರ ಶತನಾಮಾವಳಿ, ನಾಮಸಂಕೀರ್ತನೆ, ಶತ ರುದ್ರಾಭಿಷೇಕ ಪೂರ್ವಕ ರುದ್ರಹವನ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಅಪರಾಹ್ನ 4-30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೆ.ಎಸ್. ಕೃಷ್ಣ ಭಟ್, ಮ್ಯಾನೇಜಿಂಗ್ ಟ್ರಸ್ಟಿ, ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್, ಅಳಿಕೆ ಇವರು ಸಭಾಧ್ಯಕ್ಷತೆ ವಹಿಸಲಿದ್ದಾರೆ.

ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನವನ್ನು ಪರಮಪೂಜ್ಯ ಪದ್ಮವಿಭೂಷಣ, ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಇವರು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ. ಆರ್. ವಾಸುಕಿ, ಟ್ರಸ್ಟಿ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ, ಸಂಚಾಲಕರು, ಶ್ರೀ ಸತ್ಯಸಾಯಿ ಎಜ್ಯುಕೇಶನ್ ಟ್ರಸ್ಟ್, ಕರ್ನಾಟಕ ಇವರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ‘ಪುಣ್ಯಕೋಟೆ’ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆಯ ಪ್ರಾಂಶುಪಾಲರು, ಉಪನ್ಯಾಸಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








