- Advertisement -
- Advertisement -
ಬೆಂಗಳೂರು; ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತ ಸ್ನೇಹಿತೆ ಶಶಿಕಲಾ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಬೌರಿಂಗ್ನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
63 ವರ್ಷದ ಶಶಿಕಲಾ ಟೈಪ್-2 ಡಯಾಬಿಟಿಸ್ನಿಂದ ಕೂಡ ಬಳಲುತ್ತಿದ್ದಾರೆ. ಅಲ್ಲದೇ ಅವರಿಗೆ ಉಸಿರಾಟ ಸಂಬಂಧಿ (SARI) ಆರೋಗ್ಯ ಸಮಸ್ಯೆ ಕೂಡ ಉಲ್ಬಣಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಆ್ಯಂಟಿ ಬಯೋಟಿಕ್ಸ್, ಆ್ಯಂಟಿ ವೈರಸಲ್ ಮೆಡಿಸಿನ್, ಇನ್ಸುಲಿನ್ ಮುಂತಾದ ಅವಶ್ಯಕ ಔಷಧಿಗಳನ್ನು ನೀಡಲಾಗಿದೆ ಎಂದು ಆಸ್ಪತ್ರೆ ಪ್ರಕಟನೆ ತಿಳಿಸಿದೆ.
ಪರೀಕ್ಷೆ ವೇಳೆ ಅವರ ಪಲ್ಸ್ ರೇಟ್ 89 ಬೀಟ್ ಪರ್ ಮಿನ್ಯೂಟ್, ಹೈ ಬ್ಲಡ್ಪ್ರೆಷರ್ ಇರೋದು ತಿಳಿದು ಬಂದಿದೆ. ಅಲ್ಲದೇ, ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಅವರ ಶ್ವಾಸಕೋಶದಲ್ಲಿ ಸೋಂಕು ತಗುಲಿರೋ ಲಕ್ಷಣಗಳು ಕಂಡು ಬಂದಿದ್ದು, ಕೊರೊನಾ ಸೋಂಕು ತಗುಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
- Advertisement -