Thursday, July 30, 2026
spot_imgspot_img
spot_imgspot_img

ಪಾಕ್ ಉಗ್ರರಿಂದ ಹೊಸ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆ!

- Advertisement -
- Advertisement -

ನವದೆಹಲಿ: ಪಾಕಿಸ್ತಾನಿ ಉಗ್ರರು ಫೇಸ್‍ಬುಕ್, ವಾಟ್ಸಪ್ ಬದಲಿಗೆ ಹೊಸ ಅಪ್ಲಿಕೇಶನ್ ಬಳಸಲು ಅರಂಭಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಟರ್ಕೀಶ್ ಮೂಲದ ಕಂಪೆನಿಯೊಂದು ಸಿದ್ಧಪಡಿಸಿದ ಹೊಸ ಮೆಸೇಜಿಂಗ್ ಅಪ್ಲಿಕೇಶನ್‍ನನ್ನು ಉಗ್ರರು ಬಳಸುತ್ತಿದ್ದಾರೆ. ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳು ಹೊಸ ಭದ್ರತಾ ನೀತಿಗಳನ್ನು ಪರಿಚಯಿಸುತ್ತಿರುವ ಬೆನ್ನಲ್ಲೇ ಪಾಕ್‍ನಲ್ಲಿ ಈ ಬೆಳವಣಿಗೆ ನಡೆದಿದೆ.

ಕಾಶ್ಮೀರದ ಉಗ್ರರನ್ನು ಎನ್ ಕೌಂಟರ್ ಮೂಲಕ ಸೆದೆಬಡಿದ ನಂತರ ಹಾಗೂ ಕೆಲ ಉಗ್ರರು ಶರಣಾಗಿದ್ದರು. ಆಗ ಪಾಕ್ ಉಗ್ರರು ಮಾಹಿತಿ ರವಾನಿಸಲು ಹೊಸ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ, ಯೂರೋಪ್, ಟರ್ಕೀಶ್ ಮೂಲದ ಕಂಪೆನಿಗಳು ಸಿದ್ಧಪಡಿಸಿದ ಅಪ್ಲಿಕೇಶನ್ ಬಳಕೆಯನ್ನು ಉಗ್ರರು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಗ್ರರು ಬಳಸುತ್ತಿರುವ ಹೊಸ ಅಪ್ಲಕೇಶನ್ ಅತೀ ಕಡಿಮೆ ಇಂಟರ್ ನೆಟ್ ಕನೆಕ್ಷನ್ ಹೊಂದಿದೆ.

ಭಾರತ ಸರ್ಕಾರ 2019ರಲ್ಲಿ ಜಮ್ಮು ಮತ್ತು ಕಾಶ್ಮೀರ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿತ್ತು. 2020ರಲ್ಲಿ 2ಜಿ ಇಂಟರ್ ನೇಟ್ ಸೇವೆ ಆರಂಭಿಸಿತ್ತು. ಈ ಪರಿಣಾಮವಾಗಿ ಉಗ್ರರು ಅವರದ್ದೇ ಆದ ಹೊಸ ಅಪ್ಲಿಕೇಶನ್ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!