Saturday, September 12, 2026
spot_imgspot_img
spot_imgspot_img

ಮಂಗಳೂರು: ಕರ್ತವ್ಯ ನಿರತ ಸೆಕ್ಯುರಿಟಿ ಗಾರ್ಡ್ ಮಹಡಿಯಿಂದ ಬಿದ್ದು ಮೃತ್ಯು!

- Advertisement -
- Advertisement -

ಮಂಗಳೂರು: ಕರ್ತವ್ಯ ನಿರತ ಸೆಕ್ಯುರಿಟಿ ಗಾರ್ಡ್ ಓರ್ವರು ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಉಳ್ಳಾಲ ಯೆನಪೋಯ ಬಳಿಯ ಹಸನ್ ಛೇಂಬರ್ಸ್ ಕಟ್ಟಡದಲ್ಲಿ ನಡೆದಿದೆ.

ಕುತ್ತಾರು ಮಜಲುತೋಟ ನಿವಾಸಿ ಸತೀಶ್ (38) ಎಂಬವರೇ ಮೃತರಾದವರು. ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದ ಸತೀಶ್ ರಾತ್ರಿ ಆರನೇ ಮಹಡಿಗೆ ತೆರಳಿ ಲಿಫ್ಟ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಆಯತಪ್ಪಿ ಆರನೇ ಮಹಡಿಯಿಂದ ಕೆಳಗೆ ಬಿದ್ದ ಸತೀಶ್ ತಲೆಗೆ ಗಂಭೀರ ಗಾಯಗೊಂಡು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೊಣಾಜೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಹೋದ್ಯೋಗಿಯೋರ್ವರು ಅಪಾಯದ ಮುನ್ಸೂಚನೆ ನೀಡಿದ್ದರೂ ಸತೀಶ್ ತೆರಳಿದ್ದರೆನ್ನಲಾಗಿದೆ.

- Advertisement -

Related news

error: Content is protected !!