- Advertisement -
- Advertisement -
ಬೆಂಗಳೂರು: ತನ್ನ ಸುಮಧುರ ಕಂಠದಿಂದಲೇ ಮನೆ ಮಾತಾಗಿರುವ ಗಾಯಕಿ ಅಖಿಲಾ ಪಜಿಮಣ್ಣುರವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ಕನ್ನಡ ಕೋಗಿಲೆ’ಯ ಮೂಲಕ ಮನೆಮಾತಾಗಿದ್ದ ಗಾಯಕಿ ಅಖಿಲಾ ಪಜಿಮಣ್ಣು ರವರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ. ಈ ಬಗ್ಗೆ ಸಿಂಗರ್ ತಮ್ಮ ಇನ್ಸ್ಟಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

ಧನಂಜಯ್ ಶರ್ಮಾ ಎಂಬವರ ಜೊತೆ ಅಖಿಲಾ ನಿಶ್ಚಿತಾರ್ಥ ನೆರವೇರಿದೆ. ಎಂಗೇಜ್ಮೆಂಟ್ ಕಾರ್ಯಕ್ರಮದ ಸಂಪೂರ್ಣ ವೀಡಿಯೋವನ್ನು ಅಖಿಲಾ ತಮ್ಮ ಇನ್ ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾನು ಎಂಗೇಜ್ ಆಗಿರುವ ವಿಚಾರವನ್ನು ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.


- Advertisement -








