Tuesday, July 28, 2026
spot_imgspot_img
spot_imgspot_img

ವಿಟ್ಲ: ಕೊಳ್ನಾಡು ಗ್ರಾಮದಲ್ಲಿ ಒಂಟಿ ಕಾಡುಕೋಣ ಪ್ರತ್ಯಕ್ಷ- ಆತಂಕದಲ್ಲಿ ಗ್ರಾಮದ ಜನತೆ!

- Advertisement -
- Advertisement -

ವಿಟ್ಲ: ಕೊಳ್ನಾಡು ಗ್ರಾಮದ ಸುತ್ತಮುತ್ತಲಿನ ಭಾಗದಲ್ಲಿ ಒಂಟಿ ಕಾಡುಕೋಣ ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿದೆ.

ಕೊಳ್ನಾಡು ಗ್ರಾಮದ ಸೆರ್ಕಳ, ಪೀಲ್ಯಡ್ಕ, ನಾರ್ಶ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡುಕೋಣ ಪತ್ತೆಯಾಗಿದೆ. ಈ ಭಾಗದ ಸುತ್ತಮುತ್ತಲಿನಲ್ಲಿ ಹಲವು ಮನೆಗಳು, ಶಾಲೆಗಳಿವೆ. ಪ್ರತಿನಿತ್ಯ ನೂರಾರು ಜನರು ಇದೇ ರಸ್ತೆ ಮೂಲಕ ಸಂಚಾರ ಮಾಡುತ್ತಿದ್ದು, ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದೆ. ಇದೀಗ ಕಾಡುಕೋಣ ಪ್ರತ್ಯಕ್ಷವಾಗಿದ್ದರಿಂದ ಜನರು ಆತಂಕಪಡುವಂತಾಗಿದೆ.

ಕೆಲವು ದಿನಗಳ ಹಿಂದೆ ಕುಡ್ತಮುಗೇರು ನಿಂದ ಕನ್ಯಾನ ಸಂಪರ್ಕಿಸುವ ಬೊಳ್ಪಾದೆ ರಕ್ಷಿತಾರಣ್ಯದಲ್ಲಿ ಕಾಡು ಕೋಣ ರಸ್ತೆ ದಾಟುತ್ತಿರುವುದನ್ನು ಕೆಲವರು ನೋಡಿದ್ದು, ಬಳಿಕ ಇದೀಗ ಮತ್ತೆ ಕಾಡುಕೋಣ ಕಾಣಿಸಿಕೊಂಡಿದೆ.

- Advertisement -

Related news

error: Content is protected !!