Monday, August 31, 2026
spot_imgspot_img
spot_imgspot_img

ವಿಟ್ಲ : ಅಪ್ರಾಪ್ತ ಬಾಲಕಿ ಅತ್ಯಾಚಾರ ಮತ್ತು ನಗ್ನ ಫೋಟೋ ಪ್ರಕರಣ – ಆರೋಪಿಯ ಬಂಧನ – ಇನ್ನೊಬ್ಬ ಆರೋಪಿ ಪರಾರಿಯಾಗಲು ಸಂತ್ರಸ್ತ ಬಾಲಕಿಯ ಅಣ್ಣ ನ ಸಹಕಾರ..!

- Advertisement -
- Advertisement -

ವಿಟ್ಲ: ಬೋಳಂತೂರು ಗ್ರಾಮದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಬೆತ್ತಲೆ ಫೋಟೋ ಕ್ಲಿಕ್ಕಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಹಾಗೂ ಮತ್ತೊಬ್ಬ ಆರೋಪಿ ಪರಾರಿಯಾಗಲು ಸಹಕರಿಸಿದ ಆರೋಪಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಆರೋಪಿ ಅಬೂಬಕ್ಕರ್ ಸಿದ್ದೀಕ್ ಹಾಗೂ ಮತ್ತೊಬ್ಬ ಆರೋಪಿ ಚಪ್ಪಿ ಪರಾರಿಯಾಗಲು ಸಹಕರಿಸಿದ ಬಾಲಕಿಯ ಸಹೋದರನನ್ನು ಬಂಧಿಸಲಾಗಿದೆ.

ಬಾಲಕಿಯ ಸಂಬಂಧಿಕರ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ‌ ಆರೋಪಿಗಳ ಪೈಕಿ ಅಬೂಬಕ್ಕರ್ ಸಿದ್ದೀಕ್ ಎಂಬಾತನ ‌ಬಂಧನವಾಗಿದ್ದು, ಮತ್ತೋರ್ವ ಆರೋಪಿ ಚಪ್ಪಿ ಎಂಬಾತನ ಬಂಧನಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕರ ಸೂಚನೆಯಂತೆ ವಿಟ್ಲ ಪೊಲೀಸ್ ಉಪನಿರೀಕ್ಷಕರ ತನಿಖಾ ತಂಡ ತೆರಳಿದ್ದಾಗ ಸಂತ್ರಸ್ತ ಬಾಲಕಿಯ ಅಣ್ಣನು ಆರೋಪಿ ಚಪ್ಪಿ ಎಂಬಾತನಿಗೆ‌ ಪೊಲೀಸರು ಆತನ ಬಂಧನಕ್ಕೆ ಬರುತ್ತಿರುವ ಮಾಹಿತಿ ನೀಡಿ ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿದ್ದಾನೆ .ಆದ್ದರಿಂದ ಸಂತ್ರಸ್ಥೆಯ ಅಣ್ಣನನ್ನೂ ಬಂಧಿಸಿದ್ದು ತನಿಖೆ‌ ಪ್ರಗತಿಯಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!