Sunday, June 21, 2026
spot_imgspot_img
spot_imgspot_img

ಹಿಂದೂ ಜಾಗೃತಿ ಸಮಾವೇಶ ಆಯೋಜನ ಸಮಿತಿ ಮುಡಿಪು ವತಿಯಿಂದ “ಹಿಂದೂ ಜಾಗೃತಿ ಸಮಾವೇಶ”

- Advertisement -
- Advertisement -

ಮುಡಿಪು: ಇತ್ತೀಚಿನ ದಿನಗಳಲ್ಲಿ ಹಿಂದೂ ಸಮಾಜದ ಯುವತಿಯರು ಹಾಗೂ ಮಾತೆಯರ, ಧಾರ್ಮಿಕ ಕೇಂದ್ರಗಳ ಮತ್ತು ಗೋವುಗಳ ಮೇಲೆ ನಡೆಯುತ್ತಿರುವ ನಿರಂತರ ಆಕ್ರಮಣಗಳಿಂದ ಜಾಗೃತರಾಗುವ ನಿಟ್ಟಿನಲ್ಲಿ ಇಂತಹ ದುಷ್ಕೃತ್ಯಗಳ ವಿರುದ್ಧ ಜನಜಾಗೃತಿಗಾಗಿ ಹಿಂದೂ ಜಾಗೃತಿ ಸಮಾವೇಶ ಆಯೋಜನ ಸಮಿತಿ ಮುಡಿಪು ಇದರ ಆಶ್ರಯದಲ್ಲಿ ‘ಹಿಂದೂ ಜಾಗೃತಿ ಸಮಾವೇಶ’ವು ಫೆ. 11 ರಂದು ಶ್ರೀಕೃಷ್ಣ ನಗರ ಮುಡಿಪು (ಆಮ್ಮೆಂಬಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ) ನಡೆಯಲಿದೆ.

ಹಿಂದೂ ಸಮಾಜ ಬಾಂಧವರಿಗೆ ಧೈರ್ಯ ತುಂಬುವ ಸಲುವಾಗಿ ಸಮಾಜದ ಹಿರಿಯರು ಮಾರ್ಗದರ್ಶನ ನೀಡಲಿದ್ದಾರೆ.

ದಿಕ್ಸೂಚಿ ಭಾಷಣಕಾರರಾಗಿ ಕೇಶವ ಮೂರ್ತಿ (ಕಾರ್ಯದರ್ಶಿ ದಕ್ಷಿಣ ಪ್ರಾಂತ ಹಿಂದೂ ಜಾಗರಣ ವೇದಿಕೆ)
ಮೀನಾಕ್ಷಿ ಭಗಿನಿ (ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್) ಆಗಮಿಸಲಿದ್ದಾರೆ.

ಎಲ್ಲರೂ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕಾಗಿ ಹಿಂದೂ ಜಾಗೃತಿ ಸಮಾವೇಶ ಆಯೋಜನಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

Related news

error: Content is protected !!