Wednesday, October 7, 2026
spot_imgspot_img
spot_imgspot_img

ಕಾರ್ಕಳ: ಇಸ್ರೋ ವಿಜ್ಞಾನಿ ನದಿಯಲ್ಲಿ ಮುಳುಗಿ ಸಾವು !

- Advertisement -
- Advertisement -

ಕಾರ್ಕಳ: ನಿವೃತ್ತ ಇಸ್ರೋ ವಿಜ್ಞಾನಿಯೊಬ್ಬರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸ್ವರ್ಣ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರು ಬಸವನಗುಡಿ ನಿವಾಸಿ ನಿವೃತ್ತ ಇಸ್ರೋ ವಿಜ್ಞಾನಿ ರತ್ನಾಕರ್ ಎಸ್.ಸಿ(63) ಸ್ವರ್ಣ ನದಿಯಲ್ಲಿ ಮುಳುಗಿ ಮೃತಪಟ್ಟವರು.

ಇವರು ಕಾರ್ಕಳದ ಗೋವಿಂದೂರು ಎರ್ಲಪಾಡಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ವಾಸವಾಗಿದ್ದರು. ಆಶ್ರಮದ ಬಳಿ ಇರುವ ಸ್ವರ್ಣ ನದಿಗೆ ಸ್ನಾನಕ್ಕೆಂದು ಹೋದವರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ. ಇವರ ಮೃತದೇಹ ಪತ್ತೆಯಾಗಿದ್ದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!