Friday, July 24, 2026
spot_imgspot_img
spot_imgspot_img

ರಾಬರ್ಟ್ ಸಿನಿಮಾದ ಪೈರಸಿ ಪ್ರತಿ ಹಂಚುತ್ತಿದ್ದ ವ್ಯಕ್ತಿಯ ಬಂಧನ!

- Advertisement -
- Advertisement -

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ರಾಬರ್ಟ್ ಸಿನಿಮಾದ ಪೈರಸಿ ಪ್ರತಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಯಾದಗಿರಿಯ ವಿಶ್ವನಾಥ್ ಎಂದು ಗುರುತಿಸಲಾಗಿದೆ. ವಿಶ್ವನಾಥ್‌ ಕೆ.ಆರ್‌ ರಸ್ತೆಯಲ್ಲಿ ವಾಸವಿದ್ದರು. ತಮ್ಮೊಂದಿಗೆ ಸಿನಿಮಾ ಹೆಚ್‌.ಡಿ ಪ್ರಿಂಟ್‌ ಇರುವುದಾಗಿ ಹೇಳಿ ಮಾರಾಟ ಮಾಡುತ್ತಿದ್ದರು.

ಈ ವಿಚಾರದ ಬಗ್ಗೆ ಮಾಹಿತಿ ಬರುತ್ತಿದ್ದ ಕೂಡಲೇ ಮಂಜುನಾಥ್‌ ಎಂಬವರು ಗ್ರಾಹಕರ ಸೋಗಿನಲ್ಲಿ ತೆರಳಿ ಆರೋಪಿಯ ಬಳಿ ವಿಚಾರಿಸಿದ್ದಾರೆ. ಆರೋಪಿಯು ಮಂಜುನಾಥ್‌ ರವರ ಬಳಿಯೂ ಹಣ ಕೇದ್ದು, ಕೂಡಲೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಉಮಾಪತಿ ಫಿಲ್ಮ್ಸ್ ವ್ಯವಸ್ಥಾಪಕ ಮಂಜುನಾಥ್ ರವರು ಪೈರಸಿ ವಿಚಾರದ ಬಗ್ಗೆ ದೂರು ನೀಡಿದ್ದರು. ದೂರಿನ ಅನ್ಯಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದ್ದಾರೆ.

ಆರೋಪಿಯ ಮೊಬೈಲ್‌ನಲ್ಲಿ ಸಿನಿಮಾ ಪೈರಸಿ ಪ್ರತಿ ಪತ್ತೆಯಾಗಿದೆ. ಆತ ಪೈರಸಿ ಪ್ರತಿಯನ್ನು ಇನ್‌ಸ್ಟಾಗ್ರಾಂ, ವಾಟ್ಸಾಪ್ ಜಾಲತಾಣಗಳಲ್ಲಿ ಹಂಚಿಕೆ ಮಾಡಿರುವುದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!