Wednesday, September 2, 2026
spot_imgspot_img
spot_imgspot_img

ಯಶ್ ರೈತರ ವಿರುದ್ಧ ಗೂಂಡಾ ವರ್ತನೆ ತೋರಿದ್ದಾರೆ; ಕರ್ನಾಟಕ ರಾಜ್ಯ ರೈತ ಸಂಘ ದೂರು

- Advertisement -
- Advertisement -

ಹಾಸನ: ಹಾಸನದ ತಿಮ್ಲಾಪುರ ಸನಿಹದ ದುದ್ದ ಹೋಬಳಿಯಲ್ಲಿರುವ ಯಶ್ ಪಾರ್ಮಹೌಸ್ ವಿವಾದ ತಾರಕಕ್ಕೇರಿದೆ. ಯಶ್ ರೈತರ ವಿರುದ್ಧ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಣ್ಣಾಜಪ್ಪ ಶನಿವಾರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ರೈತರ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ ಎಂದು ಹೇಳುವ ಯಶ್ ತಮ್ಮ ಜಮೀನು ಉಳಿಸಿಕೊಳ್ಳುವ ಸಲುವಾಗಿ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿದ್ದಾರೆ.

ಪ್ರಶ್ನಿಸಿದ ರೈತರಿಗೆ ಗೂಂಡಾಗಳನ್ನು ಕರೆಸಿ ಹೆದರಿಸಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದ ಅಣ್ಣಾಜಪ್ಪ ರೈತರಿಗೆ ಸೂಕ್ತ ‌ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಯಶ್ ತಮ್ಮ ಜಮೀನಿಗೆ ಕಂಪೌಂಡ್ ನಿರ್ಮಿಸುವ ಭರದಲ್ಲಿ ರೈತರಿಗೆ ಓಡಾಡಲು ದಾರಿ ಇಲ್ಲದಂತೆ ಮಾಡಿದ್ದಾರೆ. ದಾರಿ ಬಿಡಿಸಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ದುದ್ದ ಹೋಬಳಿಯ ಜಮೀನಿನಲ್ಲಿ ಯಶ್ ಕುಟುಂಬ ರಸ್ತೆ ನಿರ್ಮಿಸುವ ವಿಚಾರಕ್ಕೆ ಸ್ಥಳೀಯರೊಂದಿಗೆ ಗಲಾಟೆ ಮಾಡಿಕೊಂಡಿತ್ತು. ಸ್ಥಳೀಯರು ಹಾಗೂ ಯಶ್ ತಂದೆ ತಾಯಿ ನಡುವೆ ಗಲಾಟೆಯಾಗಿದ್ದು ಸ್ವತಃ ಪೊಲೀಸ್ ಠಾಣೆಗೆ ತೆರಳಿದ್ದ ಯಶ್ ಸ್ಥಳೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಯಶ್ ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿದ್ದು ಈ ವಿವಾದ ಮತ್ತಷ್ಟು ಗಂಭೀರವಾಗೋ ಸಾಧ್ಯತೆ ಇದೆ.

- Advertisement -

Related news

error: Content is protected !!