Wednesday, September 2, 2026
spot_imgspot_img
spot_imgspot_img

ಸಹಪಾಠಿಗಳಿಂದ ನಿಂದನೆಗೊಳಗಾದ ವಿದ್ಯಾರ್ಥಿ ನೇಣಿಗೆ ಶರಣು!

- Advertisement -
- Advertisement -

ಹಾಸನ‌: ಸಹಪಾಠಿಗಳಿಂದ ನಿಂದನೆಗೊಳಗಾದ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಕಂಚಮಾರನಹಳ್ಳಿ ಬಳಿಯ ಖಾಸಗಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಹರ್ಷಿತ್‌‌ ಆತ್ಮಹತ್ಯೆಗೆ ಶರಣಾದ ಬಾಲಕ.

ಒಂದು ವರ್ಷದ ಹಿಂದೆ ಆತನಿಗೆ ಸ್ಟ್ರೋಕ್‌ ಆಗಿದ್ದು, ಆತನ ಸಹಪಾಠಿಗಳು ಇದೇ ಕಾರಣವನ್ನು ಇಟ್ಟುಕೊಂಡು ಶಾಲೆಗೆ ಹೋದಾಗ ಆತನಿಗೆ ರೇಗಿಸುತ್ತಿದ್ದರಂತೆ.

ಈ ವಿಚಾರದ ಬಗ್ಗೆ ಮಾ.19ರಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಗಲಾಟೆ ನಡೆದ ಸಂದರ್ಭ ಶಿಕ್ಷಕರು ವಿದ್ಯಾರ್ಥಿಗಳಿಗೆ ಬುದ್ದಿ ಮಾತು ಹೇಳಿದ್ದರು. ಈ ಕಾರಣದಿಂದ ಬೇಸರಗೊಂಡ ಹರ್ಷಿತ್‌ ಶಾಲೆ ಬಿಟ್ಟು ಹೋಗಿದ್ದು, ಮನೆಗೆ ತೆರಳಿದ ಬಳಿಕ ಮನೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ಬಳಿಕ ಆತ ದನ ಮೇಯಿಸಲು ಹೋದ ವೇಳೆ ಜಮೀನಲ್ಲಿ ಸಮೀಪ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!