Wednesday, September 2, 2026
spot_imgspot_img
spot_imgspot_img

ನಿಂತಿದ್ದ ಟ್ರಕ್ ಗೆ ಟೆಂಪೋ ಡಿಕ್ಕಿ: ಐವರು ಮಹಿಳೆಯರ ಸಹಿತ ಎಂಟು ಮಂದಿ ದಾರುಣ ಸಾವು!

- Advertisement -
- Advertisement -

ನೆಲ್ಲೂರು: ಶ್ರೀಶೈಲಂ ದರ್ಶನ ಮುಗಿಸಿ ಟೆಂಪೋದಲ್ಲಿ ಊರಿಗೆ ಮರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ಐವರು ಮಹಿಳೆಯರ ಸಹಿತ ಎಂಟು ಮಂದಿ ಸಾವನ್ನಪ್ಪಿದ ಘಟನೆ ನೆಲ್ಲೂರು ಜಿಲ್ಲೆಯ ಬಚ್ಚಿರೆಡ್ಡಿ ಪಾಲೆಂ ಸಮೀಪದ ದಾಮರ ಮಡುಗ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನಿಂತಿದ್ದ ಟ್ರಕ್ ಗೆ ಟೆಂಪೋ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಐವರು ಮಹಿಳೆಯರ ಸಹಿತ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟು, ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಟೆಂಪೋದಲ್ಲಿ ಒಟ್ಟು 14 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಮೃತಪಟ್ಟವರು ತಮಿಳುನಾಡು ಮೂಲದವರಾಗಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!