Wednesday, September 2, 2026
spot_imgspot_img
spot_imgspot_img

ಅಶ್ಲೀಲ ಸಿಡಿ ಪ್ರಕರಣ: ಇಂದು ಕೂಡಾ ಯುವತಿಯ ವಿಚಾರಣೆ ಮುಂದುವರಿಕೆ!

- Advertisement -
- Advertisement -

ಬೆಂಗಳೂರು: ಅಶ್ಲೀಲ ಸಿಡಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಯುವತಿಯ ವಿಚಾರಣೆ ಇಂದು ಕೂಡ ಮುಂದುವರಿಯಲಿದೆ. ನಿನ್ನೆ ಪ್ರಾಥಮಿಕ ವಿಚಾರಣೆ ನಡೆಸಿದ ವಿಶೇಷ ತನಿಖಾ ತಂಡ, ಯುವತಿಯ ಮನವಿ ಪುರಸ್ಕರಿಸಿ ಇಂದು ವಿಚಾರಣೆ ಮುಂದುವರಿಸಲು ತೀರ್ಮಾನಿಸಿದೆ.

ಯುವತಿ ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ತನಿಖೆ ಪ್ರಕ್ರಿಯೆಯ ಭಾಗವಾಗಿ ಪೊಲೀಸರ ಮುಂದೆ ಹೇಳಿಕೆ ನೀಡಬೇಕಾಗಿದೆ.

ಇದೇ ವೇಳೆ ಸಿಡಿ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಸಹಜವಾಗಿಯೇ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿರುವ ರಮೇಶ್ ಜಾರಕಿಹೊಳಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಕೂಡ ಇದೆ.

- Advertisement -

Related news

error: Content is protected !!