Tuesday, April 30, 2024
spot_imgspot_img
spot_imgspot_img

ಹೋಳಿ ಆಚರಿಸಲು ಸ್ನೇಹಿತರ ಜತೆ ತೆರಳಿದ್ದ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ!

- Advertisement -G L Acharya panikkar
- Advertisement -

ಅಗರ್ತಲಾ: ಬಣ್ಣದ ಹಬ್ಬ ಹೋಳಿ ಆಚರಿಸಲು ಸ್ನೇಹಿತರ ಜತೆ ತೆರಳಿದ್ದ 2 ಬಾಲಕಿಯರ ಮೇಲೆ 8 ಮಂದಿ ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ತ್ರಿಪುರದ ಕೊವಾಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 14 ವರ್ಷ ಪ್ರಾಯದ ಇಬ್ಬರು ಬಾಲಕಿಯರು ಪರಿಚಯದ ಯುವಕರ ಜತೆ ಹೋಳಿ ಆಚರಿಸಲು ತೆರಳಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ. ಎಲ್ಲ ಆರೋಪಿಗಳು 18 ರಿಂದ 25 ವರ್ಷದೊಳಗಿನವರಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾರ್ಚ್ 29ರಂದು ಮನೆಯಿಂದ ತೆರಳಿದ್ದ ಈ ಬಾಲಕಿಯರು ಅಂದು ಮನೆಗೆ ಬಂದಿರಲಿಲ್ಲ. ಮರುದಿನ ಮನೆಗೆ ತಲುಪಿದ ಅವರು ಪೋಷಕರ ಬಳಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಇದೀಗ ಬಾಲಕಿಯರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

- Advertisement -

Related news

error: Content is protected !!