Wednesday, September 2, 2026
spot_imgspot_img
spot_imgspot_img

ಈಜಲು ತೆರಳಿದ್ದ ಮೂವರು ಬಾಲಕರು ಹೊಂಡದಲ್ಲಿ ಮುಳುಗಿ ದಾರುಣ ಸಾವು!

- Advertisement -
- Advertisement -

ಹಾವೇರಿ: ಈಜಲು ತೆರಳಿದ್ದ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಹಾನಗಲ್​ ತಾಲೂಕಿನ ಮಂತಗಿ ಗ್ರಾಮದಲ್ಲಿ ನಡೆದಿದೆ.

ಅಹ್ಮದ್​ ಅಂಚಿ(15), ಸಾಹಿಲ್​ ಡೊಂಗ್ರೆ(15), ಅಖ್ತರ್​ ರಜಾ ಯಲವಟ್ಟಿ(15) ಮೃತ ದುರ್ದೈವಿಗಳು. ಇಂದು ಶಾಲೆಗೆ ರಜೆಯಿದ್ದ ಕಾರಣ ಮೂವರೂ ಈಜಲು ಹೊಂಡಕ್ಕೆ ತೆರಳಿದ್ದಾರೆ. ಆದರೆ ಹೊಂಡದಲ್ಲಿ ಈಜಲಾಗದೆ ಒಬ್ಬರನ್ನೊಬ್ಬರು ಕಾಪಾಡಲು ಹೋಗಿ ಮೂವರೂ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೂವರ ಮೃತ ದೇಹವನ್ನ ಹೊರತೆಗೆದಿದ್ದಾರೆ. ಸ್ಥಳದಲ್ಲಿ ಮಕ್ಕಳ ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಹಾನಗಲ್​ ತಹಶೀಲ್ದಾರರು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಾನಗಲ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!