- Advertisement -
- Advertisement -
ಕಾರವಾರ: ಅಕ್ರಮವಾಗಿ ಗೋವಾದಿಂದ ಹುಬ್ಬಳ್ಳಿಗೆ ಮದ್ಯ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದ ಬಳಿ ನಡೆದಿದೆ.

ಲಾರಿಯಲ್ಲಿ ಬ್ರಾಂಡೆಡ್ ಮದ್ಯವನ್ನ ತುಂಬಲಾಗಿತ್ತು. ಮದ್ಯ ತುಂಬಿದ ಲಾರಿ ಪಲ್ಟಿಯಾದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಓಡೋಡಿ ಬಂದಿದ್ದಾರೆ. ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮದ್ಯದ ಬಾಟಲಿಯನ್ನ ಎತ್ತಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -








