Tuesday, June 16, 2026
spot_imgspot_img
spot_imgspot_img

ಶಾಸಕ ಯು ಟಿ ಖಾದರ್ ಸಂಚರಿಸುತ್ತಿದ್ದ ಕಾರು ಅಪಘಾತ; ಪ್ರಾಣಾಪಾಯದಿಂದ ಪಾರು

- Advertisement -
- Advertisement -

ದಾವಣಗೆರೆ: ಮಾಜಿ ಸಚಿವ, ಶಾಸಕ ಯು ಟಿ ಖಾದರ್ ಸಂಚರಿಸುತ್ತಿದ್ದ ಕಾರು ಅಪಘಾತಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಹೊನಲಿಕೆರೆ ಕ್ರಾಸ್ ನಲ್ಲಿ ನಡೆದಿದೆ. ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

driving

ಇಂದು ಮುಂಜಾನೆ 5 ಗಂಟೆಗೆ ಈ ಅವಘಡ ಸಂಭವಿಸಿದೆ. ಎದುರಿನಿಂದ ಸಾಗುತ್ತಿದ್ದ ಲಾರಿ ಚಾಲಕ ಆಕಸ್ಮಿಕವಾಗಿ ಬ್ರೇಕ್ ಹಾಕಿದ್ದು ಹಿಂದಿನಿಂದ ಬಂದ ಶಾಸಕರ ಕಾರು ಡಿಕ್ಕಿ ಹೊಡೆದಿದೆ. ಯು ಟಿ ಖಾದರ್ ಅವರು ಸಣ್ಣ ಪುಟ್ಟ ಗಾಯ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಸಿಬ್ಬಂದಿ ವರ್ಗದವರಿಗೂ ಯಾವುದೇ ಅಪಾಯ ಸಂಭವಿಸಲಿಲ್ಲ. ಶಾಸಕ ಯು ಟಿ ಖಾದರ್ ಕಾರ್ಯಕ್ರಮ ರದ್ದುಗೊಳಿಸಿ ಮತ್ತೆ ಬೆಂಗಳೂರಿಗೆ ತೆರಳಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

Related news

error: Content is protected !!