Wednesday, September 2, 2026
spot_imgspot_img
spot_imgspot_img

ಅಪ್ರಾಪ್ತ ಬಾಲಕಿಯ ಮೇಲೆ 12 ಮಂದಿಯಿಂದ ಅತ್ಯಾಚಾರ: ಆರೋಪಿಗಳ ಬಂಧನ

- Advertisement -
- Advertisement -

ತಮಿಳುನಾಡು: 14 ವರ್ಷದ ಬಾಲಕಿಯ ಮೇಲೆ 12 ಮಂದಿ ತಿಂಗಳಲ್ಲಿ ಎರಡು ಬಾರಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ನಡೆದಿದೆ.

ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ತಾಯಿ ಕೆಲಸಕ್ಕೆ ಹೋಗುತ್ತಿದ್ದರು. ಹಾಗಾಗಿ ಬಾಲಕಿ ತನ್ನ ಸಹೋದರಿಯ ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ.

ಬಾಲಕಿಯ ಅಕ್ಕನ ಗಂಡನೂ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಆತ, ಆತನ ಸ್ನೇಹಿತರು ಹಾಗೂ ಬಾಲಕಿಯ ಅಕ್ಕ ಮನೆ ಕೆಲಸ ಮಾಡುತ್ತಿದ್ದ ಯಜಮಾನ ಸೇರಿ ಒಟ್ಟು 12 ಮಂದಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.

- Advertisement -

Related news

error: Content is protected !!