Monday, June 22, 2026
spot_imgspot_img
spot_imgspot_img

ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಮಂದಿ ಸಾವು!

- Advertisement -
- Advertisement -

ಮುಂಬೈ: ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿ 13 ಜನ ಮೃತಪಟ್ಟಿರುವ ಘಟನೆ ಮುಂಬೈನ ವಿರಾರ್‌ನಲ್ಲಿರುವ ವಿಜಯ ವಲ್ಲಭ ಆಸ್ಪತ್ರೆಯಲ್ಲಿ ನಡೆದಿದೆ. ಇಂದು ಮುಂಜಾನೆ ಆಸ್ಪತ್ರೆಯ ICU ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದ್ದು ಐಸಿಯುನಲ್ಲಾದ ಅಗ್ನಿ ದುರಂತ ಘಟನೆಯಲ್ಲಿ ಹಲವರು ಗಾಯಗೊಂಡಿರುವ ಮಾಹಿತಿ ದೊರೆತಿದೆ.

ಆಸ್ಪತ್ರೆಯ ICUನಲ್ಲಿ 17 ಜನರು ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಘಟನೆ ಬಳಿಕ ವಿಜಯ ವಲ್ಲಭ ಆಸ್ಪತ್ರೆಯ ರೋಗಿಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಕೇಳಿ ಬಂದಿದೆ.

ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುತ್ತಿದ್ದಾರೆ. ಇನ್ನು ಕೊರೊನಾ ಸೋಂಕಿತರು ಕೂಡಾ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಬರಬೇಕಿದೆ.

driving
- Advertisement -

Related news

error: Content is protected !!